ನೋಯ್ಡಾ (ಉತ್ತರ ಪ್ರದೇಶ ) : ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆಯೇ ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಒಂದು ವಿಶಿಷ್ಟ ನಿಯಮವನ್ನು ಜಾರಿಗೆ ತಂದಿದೆ.
ಎನ್‌ಎಂಆರ್‌ಸಿಯ ಸೆಕ್ಟರ್ 50 ನಿಲ್ದಾಣವನ್ನು ತೃತೀಯ ಲಿಂಗಿಯರಿಗಾಗಿ ಮೀಸಲಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೋಯ್ಡಾ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ರಿತು ಮಹೇಶ್ವರಿ, ತೃತೀಯ ಲಿಂಗಿಯರಿಗೆ ಈ ನಿಲ್ದಾಣದಲ್ಲಿ ಉದ್ಯೋಗ ನೀಡಲಾಗುವುದು. ಎಲ್ಲ ಪ್ರಯಾಣಿಕರಿಗೆ ನಿಲ್ದಾಣವು ತೆರೆದಿರುತ್ತದೆ ಎಂದು ಹೇಳಿದ್ದಾರೆ.