ETV Bharat / bharat

ಗುಲಾಬಿ ಬಣ್ಣದ ಫ್ಲೆಮಿಂಗೊ ಪಕ್ಷಿಗಳ 'ರಕ್ತ ಸಿಂಚನದ ಹಾಲು': ಇದೇ ಅಲ್ಲವೇ ಪ್ರಕೃತಿಯ ವಿಸ್ಮಯ?

ಎರಡು ಫ್ಲೆಮಿಂಗೊ ಪಕ್ಷಿಗಳು ತನ್ನ ಮರಿ ಪಕ್ಷಿಗೆ ಹಾಲು ಕುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ.

author img

By

Published : Feb 21, 2020, 10:38 AM IST

What's Happening In This Flamingo,ಫ್ಲೆಮಿಂಗೊ ಪಕ್ಷಿಗಳ ರಕ್ತ ಸಿಂಚನದ ಹಾಲು
ಫ್ಲೆಮಿಂಗೊ ಪಕ್ಷಿಗಳ ರಕ್ತ ಸಿಂಚನದ ಹಾಲು

ಹೈದರಾಬಾದ್: ಒಂದು ತಾಯಿ ಫ್ಲೆಮಿಂಗೊ ಪಕ್ಷಿ ಪುಟ್ಟ ಫ್ಲೆಮಿಂಗೊಗೆ ಆಹಾರ ನೀಡುತ್ತಿದೆ. ಇನ್ನೊಂದು ಪಕ್ಷಿ ಆ ತಾಯಿ ಪಕ್ಷಿಯ ತಲೆಯನ್ನು ರಕ್ತ ಬರುವಂತೆ ಕಚ್ಚುತ್ತಿರುವ ಅಪರೂಪದಲ್ಲಿ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ಈ ವಿಡಿಯೋ ನೋಡಿದ ಯಾರಾದರೂ ಈ ಪಕ್ಷಿಗಳು ಜಗಳವಾಡುತ್ತಿವೆ ಎಂದುಕೊಳ್ಳುದೆ ಇರಲಾರರು. ಆದರೆ ನಿಜಕ್ಕೂ ಈ ಪಕ್ಷಿಗಳು ಜಗಳವಾಡುತ್ತಿಲ್ಲ. ಬದಲಿಗೆ ತಮ್ಮ ಮಗುವಿಗೆ ಹಾಲುಣಿಸುತ್ತಿವೆ.

  • This crop milk is made up of protein & fat rich cells of the lining of crop, which is part of alimentary canal where food is stored before digestion. Which effectively means they are feeding their stomach before kids can start eating solid food.

    As they say "ख़ून से सींचना”

    — Parveen Kaswan, IFS (@ParveenKaswan) February 20, 2020 " class="align-text-top noRightClick twitterSection" data=" ">

ಫ್ಲೆಮಿಂಗೊ ಪಕ್ಷಿಗಳ ಜೀರ್ಣಾಂಗಗಳಲ್ಲಿ ಉತ್ಪತ್ತಿಯಾದ ಹಾಲನ್ನು ಪುಟ್ಟ ಕಂದಮ್ಮನಿಗೆ ಕುಡಿಸುವ ರೀತಿಯೇ ವಿಶಿಷ್ಠ! ಪೋಷಕ ಫ್ಲೆಮಿಂಗೊ ಪಕ್ಷಿಗಳ ಜೀರ್ಣಾಂಗಗಳಲ್ಲಿ ಹಾಲು ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪತ್ತಿಯಾದ ಹಾಲನ್ನ ಸಂಗ್ರಹಿಸಿಕೊಂಡು ಆಗಿಂದಾಗ್ಗೆ ಮರಿಹಕ್ಕಿಗೆ ಗುಟುಕಿನ ಮೂಲಕ ಕುಡಿಸುತ್ತದೆ. ಹೀಗೆ ಹಾಲು ಕುಡಿಸಲು ಇನ್ನೊಂದು ಫ್ಲೆಮಿಂಗೊ ಪಕ್ಷಿ ಸಹಾಯ ಮಾಡುತ್ತದೆ.

ಈ ಹಾಲು ಪ್ರೋಟಿನ್ ಮತ್ತು ಕೊಬ್ಬಿನಾಂಶವುಳ್ಳ ಜೀವಕೋಶಗಳಿಂದ ಕೂಡಿದೆ. ಇದು ಜೀರ್ಣಾಂಗ ಕಾಲುವೆಯ ಭಾಗವಾಗಿದ್ದು, ಜೀರ್ಣಕ್ರಿಯೆಯ ಮೊದಲು ಆಹಾರವನ್ನು ಸಂಗ್ರಹಿಸುತ್ತವೆ. ಮಕ್ಕಳು ಘನ ಆಹಾರವನ್ನು ತಿನ್ನಲು ಪ್ರಾರಂಭಿಸುವ ಮೊದಲು ಈ ಹಾಲನ್ನ ನೀಡುತ್ತವೆ ಎಂದು ಎಂದು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಫ್ಲೆಮಿಂಗೊಗಳು ದೊಡ್ಡ ಪಕ್ಷಿಗಳಾಗಿದ್ದು, ಅವುಗಳ ಉದ್ದನೆಯ ಕುತ್ತಿಗೆ, ಗುಲಾಬಿ ಅಥವಾ ಕೆಂಪು ಬಣ್ಣದ ಗರಿಗಳನ್ನು ಹೊಂದಿರುತ್ತವೆ. ಇವುಗಳು ಅಲೆದಾಡುವ ಹಕ್ಕಿಯಾಗಿದ್ದು, ಅಮೆರಿಕ, ಕೆರಿಬಿಯಾ, ಏಷ್ಯಾ, ಆಫ್ರಿಕಾ ಮತ್ತು ಯುರೋಪ್​ಗಳಲ್ಲಿ ಕಾಣಸಿಗುತ್ತವೆ. ಪಾಚಿ ಮತ್ತು ಅಕಶೇರುಕಗಳಲ್ಲಿ ಕಂಡುಬರುವ ವರ್ಣದ್ರವ್ಯಗಳನ್ನು ತಿನ್ನುವುದರಿಂದ ಇವುಗಳ ರೆಕ್ಕೆ ಕೆಂಪು ಅಥವಾ ಗುಲಾಬಿ ಬಣ್ಣದಿಂದ ಕೂಡಿರುತ್ತವೆ.

ಫ್ಲೆಮಿಂಗೊಗಳು ಸಾಮಾನ್ಯವಾಗಿ ವಲಸೆ ಹೋಗದ ಪಕ್ಷಿಗಳು. ಹಾಗೇನಾದರೂ ವಲಸೆ ಹೋದರೆ, ರಾತ್ರಿ ಸಮಯದಲ್ಲಿ ಮೋಡ ರಹಿತ ಆಕಾಶ ಇರುವಾಗ ಹಾರಲು ಬಯಸುತ್ತವೆ. ಈ ಪಕ್ಷಿಗಳ ಮೊಟ್ಟೆಗಳು ಗುಲಾಬಿ ಬಣ್ಣದಿಂದ ಕೂಡಿದ್ದು, ಹಾಲು ಕೂಡ ಗುಲಾಬಿ ಬಣ್ಣ ಹೊಂದಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.