ETV Bharat / bharat

ಇಂಡಿಗೊ ಏರ್​ಲೈನ್ಸ್​ ಸಿಬ್ಬಂದಿ ಸಂಬಳ ಕಡಿತವಿಲ್ಲ

ಕೊರೊನಾ ವೈರಸ್​ ಬಿಕ್ಕಟ್ಟಿನ ಕಾರಣದಿಂದ ಸ್ಥಳೀಯ ವಿಮಾನಯಾನ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗೆ ವಿಮಾನಯಾನ ರದ್ದಾದರೂ ತನ್ನ ಸಿಬ್ಬಂದಿ ಸಂಬಳದಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲ ಎಂದು ಇಂಡಿಗೊ ಏರ್​ಲೈನ್ಸ್ ತಿಳಿಸಿದೆ.

ಇಂಡಿಗೊ ಏರ್​ಲೈನ್ಸ್​
indigo airlines
author img

By

Published : Mar 24, 2020, 4:47 PM IST

ಮುಂಬೈ: ಕೊರೊನಾ ವೈರಸ್​ ಬಿಕ್ಕಟ್ಟಿನ ಕಾರಣದಿಂದ ದೇಶದೊಳಗಿನ ವಿಮಾನಯಾನ ಟ್ರಿಪ್​ಗಳನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಸಿಬ್ಬಂದಿ ಸಂಬಳದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಇಂಡಿಗೊ ಏರ್​ಲೈನ್ಸ್​ ತಿಳಿಸಿದೆ.

ದೇಶದೊಳಗಿನ ವಿಮಾನಯಾನವನ್ನು ಮಂಗಳವಾರ ಮಧ್ಯರಾತ್ರಿಯಿಂದ ಮಾ.31 ರವರೆಗೆ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ತಾತ್ಕಾಲಿಕ ಸ್ಥಗಿತದ ಅವಧಿಯಲ್ಲಿ ಸಿಬ್ಬಂದಿಯ ವೇತನದಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲ ಎಂದು ಇಂಡಿಗೊ ಸಿಇಒ ರೋನೊಜೊಯ್ ದತ್ತಾ ಸಿಬ್ಬಂದಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ.

ಬರುವ ದಿನಗಳು ಬಹಳ ಕಠಿಣವಾಗಿರಲಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿರಲಿವೆ. ಆದರೆ, ಒಂದು ಬಿಕ್ಕಟ್ಟು ಕೊನೆಗೊಂಡ ನಂತರ ನಾವು ನಮ್ಮೆಲ್ಲ ಹಾನಿಗಳಿಂದ ಹೊರಬರಲು ದ್ವಿಗುಣ ಶಕ್ತಿಯಿಂದ ಕೆಲಸ ಮಾಡಲಿದ್ದೇವೆ ಎಂದು ದತ್ತಾ ಇಮೇಲ್​ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.