ತೂತುಕುಡಿ (ತಮಿಳುನಾಡು): ಸ್ಮಶಾನಕ್ಕೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಸೊಂಟದೆತ್ತರದವರೆಗೆ ಹರಿಯುವ ನೀರಿನ ಮಾರ್ಗದಲ್ಲಿ ಶವವನ್ನು ಹೊತ್ತೊಯ್ಯುವ ಪರಿಸ್ಥಿತಿ ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟಿ ಬಳಿಯ ಕಟ್ಟಾಲಂಕುಲಂ ಗ್ರಾಮಸ್ಥರಿಗೆ ಎದುರಾಗಿದೆ.
ಗ್ರಾಮದಿಂದ 1.5 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೋರಿ, ಕಯಾತರ್ ಪಂಚಾಯತಿಗೆ ಅನೇಕ ಬಾರಿ ಅರ್ಜಿಗಳನ್ನ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ, ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಮಳೆಗಾಲ ಬಂದರೆ ಗ್ರಾಮದ ಜನರು ಅನಿವಾರ್ಯವಾಗಿ, ಶವವನ್ನು ಹೊತ್ತು ಸೊಂಟದೆತ್ತರದ ವರೆಗೆ ನೀರು ಹರಿಯುವ ಹಳ್ಳವನ್ನು ದಾಟಿ ಸ್ಮಶಾನಕ್ಕೆ ಸಾಗಬೇಕಿದೆ. ಇನ್ನಾದರೂ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.