ETV Bharat / bharat

BSNL, MTNL ಪುನಶ್ಚೇತನಕ್ಕೆ ಐಐಎಂ ಸಾಥ್​: 1.76 ಲಕ್ಷ ಸಿಬ್ಬಂದಿ ನಿರಾಳ -

ಟೆಲಿಕಾಂ ಮಾರುಕಟ್ಟೆಯ ಪೈಪೋಟಿ ತಡೆಯಲಾಗದೆ ತತ್ತರಿಸಿರುವ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್​' (ಬಿಎಸ್​ಎನ್​ಎಲ್​) 'ಆರ್ಥಿಕ ಸಂಕಷ್ಟ ನೆಪದಡಿ ಮುಚ್ಚುವ ಪ್ರಸ್ತಾಪವಿಲ್ಲ. ಅದರ ಪುನರುಜ್ಜೀವನಕ್ಕೆ ಯತ್ನಿಸಲಾಗುತ್ತಿದೆ' ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Jun 26, 2019, 11:50 PM IST

ನವದೆಹಲಿ: ಟೆಲಿಕಾಂ ಮಾರುಕಟ್ಟೆಯ ಪೈಪೋಟಿ ತಡೆಯಲಾಗದೆ ತತ್ತರಿಸಿರುವ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್​' (ಬಿಎಸ್​ಎನ್​ಎಲ್​) 'ಆರ್ಥಿಕ ಸಂಕಷ್ಟ ನೆಪದಡಿ ಮುಚ್ಚುವ ಪ್ರಸ್ತಾಪವಿಲ್ಲ. ಅದರ ಪುನರುಜ್ಜೀವನಕ್ಕೆ ಯತ್ನಿಸಲಾಗುತ್ತಿದೆ' ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್, 'ಬಿಎಸ್​ಎನ್​ಎಲ್​ ಮತ್ತು ಮಹಾನಗರ ಟೆಲಿಫೋನ್​ ನಿಗಮ ಲಿಮಿಟೆಡ್​ (ಎಂಟಿಎನ್​ಎಲ್​) ಯಾವುದೇ ಕಾರಣಕ್ಕೂ ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಅವುಗಳ ಪುನರುಜ್ಜೀವನಕ್ಕೆ ಅಗತ್ಯವಾದ ಪ್ರಯತ್ನ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ.

ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಅಹಮಾದಾಬಾದ್ ಹಾಗೂ ಎಂ/ಎಸ್​ ಡೆಲಾಯ್ಟ್ ಸಂಸ್ಥೆಗಳ ಸಹಾಯದಿಂದ ನಷ್ಟದಲ್ಲಿ ಸಾಗುತ್ತಿರುವ ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್​ಳಗ ಪುನಶ್ಚೇತನಕ್ಕೆ ಮಾರ್ಗಸೂಚಿ ತಯಾರಿಸುವಂತೆ ಕೋರಿದ್ದೇವೆ. ಆ ಸಂಸ್ಥೆಗಳು ನೀಡುವ ಶಿಫಾರಸುಗಳ ಅನುಗುಣವಾಗಿ ಪುನರುಜ್ಜೀವನದ ತಯಾರಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಸಂಸ್ಥೆಯಲ್ಲಿ ಸುಮಾರು 1.76 ಲಕ್ಷ ಉದ್ಯೋಗಿಗಳಿದ್ದು, ಮಾಸಿಕ ವೇತನ ಸರಿಯಾಗಿ ಪಾವತಿ ಆಗುತ್ತಿಲ್ಲವೆಂದು ಆಪಾದಿಸುತ್ತಿದ್ದಾರೆ. ಬಿಎಸ್​ಎನ್​ಎಲ್​ 2017-18ರಲ್ಲಿ ₹ 8,000 ಕೋಟಿ ನಷ್ಟಕ್ಕೀಡಾಗಿತ್ತು. ಎಂಟಿಎನ್‌ಎಲ್‌ ₹ 3,000 ಕೋಟಿ ನಷ್ಟ ಅನುಭವಿಸತ್ತು. ಉಭಯ ಕಂಪನಿಗಳಿಗೆ ಉದ್ಯೋಗಿಗಳ ವೇತನ ವಿತರಣೆಯೇ ದೊಡ್ಡ ಮೊತ್ತವಾಗುತ್ತಿದೆ. ಬಿಎಸ್​​ಎನ್​ಎಲ್​ ತನ್ನ ಒಟ್ಟು ಆದಾಯದಲ್ಲಿ ಶೇ. 65ರಿಂದ 70ರಷ್ಟನ್ನು ಸಿಬ್ಬಂದಿ ವೇತನಕ್ಕೆ ಪಾವತಿಸುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.