ETV Bharat / bharat

ತಿರುಪತಿ ನವರಾತ್ರಿ ಬ್ರಹ್ಮೋತ್ಸವ: ಮೆರವಣಿಗೆ, ಭಕ್ತರಿಗೆ ಅವಕಾಶ ನೀಡದ ಟಿಟಿಡಿ ಮಂಡಳಿ! - ತಿರುಪತಿಯಲ್ಲಿ ಕೊರೊನಾ ಸುದ್ದಿ

ತಿರುಪತಿ ತಿಮ್ಮಪ್ಪನಿಗೂ ಕೊರೊನಾ ಬಿಸಿ ತಾಗಿದ್ದು, ಹೀಗಾಗಿ ಈ ವರ್ಷದ ಬ್ರಹ್ಮೋತ್ಸವದಲ್ಲಿ ಭಕ್ತರು ಹಾಗೂ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲ.

Lord Venkateswara temple
Lord Venkateswara temple
author img

By

Published : Oct 13, 2020, 8:00 PM IST

ತಿರುಪತಿ (ಆಂಧ್ರಪ್ರದೇಶ): ಅಕ್ಟೋಬರ್​​ 16ರಿಂದ ಪ್ರಸಿದ್ಧ ಹಿಂದೂ ದೇವಸ್ಥಾನ ತಿರುಮಲದ ತಿರುಪತಿ ತಿಮ್ಮಪ್ಪನ ಸನ್ನಿದ್ಧಿಯಲ್ಲಿ ಬ್ರಹ್ಮೋತ್ಸವ ಆರಂಭಗೊಳ್ಳಲಿದೆ. ಆದರೆ, ಈ ಸಲ ಕೋವಿಡ್​ ಕಾರಣದಿಂದಾಗಿ ಮೆರವಣಿಗೆ ಹಾಗೂ ಭಕ್ತರಿಗೆ ಅವಕಾಶ ನೀಡಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಟಿಟಿಡಿಯ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಸ್​ ಜವಾಹರ್​ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶ್ರೀ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮೋತ್ಸವ ಇದೇ ಅಕ್ಟೋಬರ್​ 16ರಿಂದ ಮುಂದಿನ 9 ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಕೋವಿಡ್​ ಹಾವಳಿ ಕಾರಣ ಭಕ್ತರು ಹಾಗೂ ಮೆರವಣಿಗೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಬ್ರಹ್ಮೋತ್ಸವದ ವೇಳೆ ದೇವಸ್ಥಾನದ ಹಿರಿಯ ಅರ್ಚಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ಭಾಗಿಯಾಗಲಿದ್ದು, ಎಲ್ಲ ವಿಧಿ - ವಿಧಾನ, ಪೂಜಾ ಕಾರ್ಯಕ್ರಮಗಳು ಅವರಿಂದಲೇ ನಡೆಯಲಿವೆ ಎಂದು ತಿಳಿಸಿದ್ದಾರೆ. ಈ ವೇಳೆ ಕೋವಿಡ್​ ಮಾರ್ಗಸೂಚಿ ಕಡ್ಡಾಯವಾಗಿ ಅನುಸರಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.