ನವದೆಹಲಿ: ಕಳೆದ 14 ದಿನಗಳಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಬಂದಿರುವ ಬೆಂಗಳೂರಿನ ಯಾವುದೇ ಪ್ರಯಾಣಿಕರಲ್ಲಿ ಶಂಕಿತ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾದಲ್ಲಿ ನೆಲೆಸಿರುವ ಭಾರತೀಯರು ಹಾಗೂ ಪ್ರವಾಸಿಗರು ದೇಶಕ್ಕೆ ಬರುತ್ತಿದ್ದು, ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಚೀನಾದಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆಯಿಂದ ಇಂದು ಬೆಳಿಗ್ಗೆ 8ರವರೆಗೆ ಒಟ್ಟು 392 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗಿದೆ.
-
Airport Health Organisation GOI: No passengers to Bengaluru having history of visit to #Wuhan, China in last 14 days reported positive with #coronavirus. Total 392 passengers underwent thermal scanner screening from yesterday till 8am today at Bengaluru International airport
— ANI (@ANI) January 27, 2020 " class="align-text-top noRightClick twitterSection" data="
">Airport Health Organisation GOI: No passengers to Bengaluru having history of visit to #Wuhan, China in last 14 days reported positive with #coronavirus. Total 392 passengers underwent thermal scanner screening from yesterday till 8am today at Bengaluru International airport
— ANI (@ANI) January 27, 2020Airport Health Organisation GOI: No passengers to Bengaluru having history of visit to #Wuhan, China in last 14 days reported positive with #coronavirus. Total 392 passengers underwent thermal scanner screening from yesterday till 8am today at Bengaluru International airport
— ANI (@ANI) January 27, 2020
ಈಗಾಗಲೇ ಚೀನಾದಿಂದ ಬಂದಿರುವ ರಾಜಸ್ಥಾನ, ಹೈದರಾಬಾದ್, ಬಿಹಾರ, ಕೋಲ್ಕತ್ತಾ ಮೂಲದ ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿರುವುದು ವರದಿಯಾಗಿದೆ. ಆದರೆ ಕಳೆದ 14 ದಿನಗಳಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಹಿದಿರುಗಿರುವ ಬೆಂಗಳೂರಿನ ಯಾವುದೇ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ತಿಳಿಸಿದೆ.