ಕರ್ನೂಲ್: ಕೆಲವರು ಮಂಗ ಬಂದ್ರೆ ಸಾಕು ಕೊಂಚ ಹೆದರಿ ದೂರ ಸರಿಯುತ್ತೇವೆ. ಹಲವರು ಹಣ್ಣು- ಹಂಪಲ ನೀಡಿ ಅದಕ್ಕೆ ಹಾರೈಕೆಯೂ ಮಾಡುತ್ತಾರೆ. ಆದ್ರೆ ಇಲ್ಲೊಂದು ಮಂಗ ಮಕ್ಕಳೊಂದಿಗೆ ಶಾಲೆಗೆ ಬಂದು ಪಾಠ ಕಲಿಯುತ್ತಿದೆ.
ಹೌದು, ಪಕ್ಕದ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮಂಗವೊಂದು ಮಕ್ಕಳೊಂದಿಗೆ ಸರ್ಕಾರಿ ಶಾಲೆ ತೆರಳಿ ಪಾಠ ಕೇಳುತ್ತಿದೆ. ಇದರಿಂದ ಇಡೀ ಗ್ರಾಮವೇ ಅಚ್ಚರಿ ಪಡುತ್ತಿದೆ.
ಪ್ಯಾಪಿಲಿ ತಾಲೂಕಿನ ವೆಂಗಲಂಪಲ್ಲಿ ಗ್ರಾಮದ ದೂರದಲ್ಲಿ ಬೆಟ್ಟವೊಂದು ಇದೆ. ಕೆಲವು ದಿನಗಳಿಂದ ನಿತ್ಯ ಮಂಗವೊಂದು ಮಕ್ಕಳೊಂದಿಗೆ ಸರ್ಕಾರಿ ಶಾಲೆಗೆ ಹಾಜರಾಗುತ್ತಿದೆ. ಮಕ್ಕಳಿಗೆ ಯಾವುದೇ ರೀತಿ ತೊಂದರೆ ನೀಡುತ್ತಿಲ್ಲ ಈ ಮಂಗ. ಮಕ್ಕಳು ತಾವು ತಂದಿದ್ದ ಆಹಾರವನ್ನು ಮಂಗನಿಗೆ ನೀಡಿತ್ತಾರೆ. ಮಂಗ ಮಕ್ಕಳು ನೀಡಿದ ಆಹಾರ ತಿಂದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತೆ.
ಇನ್ನು ಈ ಮಂಗ ಗುರುಗಳು ಪಾಠ ಮಾಡುತ್ತಿರುವುದನ್ನು ಕೇಳುತ್ತೆ. ಬಳಿಕ ಮಕ್ಕಳೊಂದಿಗೆ ಆಟವಾಡುತ್ತೆ. ಶಾಲೆ ಮುಗಿದ ನಂತರ ನೇರ ತನ್ನ ಮನೆಗೆ (ಬೆಟ್ಟಕ್ಕೆ) ಮರಳುತ್ತೆ. ಇನ್ನು ಈ ಕೋತಿ ಯಾವುದೇ ಮಕ್ಕಳಿಗೆ ತೊಂದರೆ ನೀಡುವುದಿಲ್ಲ. ಮಕ್ಕಳೊಂದಿಗೆ ಬೆರತು ಎಂಜಾಯ್ ಮಾಡುವುದು ವಿಶೇಷವಾಗಿದೆ.