ನವದೆಹಲಿ: ಈ ಹಿಂದಿನ ಸಂಸತ್ ಸದಸ್ಯರು ಪಡೆಯುತ್ತಿದಂತಹ ಪಂಚತಾರ ಹೋಟೆಲ್ಗಳ ವಸತಿ ಸೌಕರ್ಯಗಳನ್ನು 17ನೇ ಲೋಕಸಭೆಯ ಚುನಾಯಿತ ಪ್ರತಿನಿಧಿಗಳಿಗೆ ಲಭ್ಯವಿರುವುದಿಲ್ಲ.
ಪಂಚತಾರ ಹೋಟೆಲ್ ವಸತಿಗಳ ಬದಲಿಗೆ ವಿವಿಧ ರಾಜ್ಯಗಳು ಹೊಂದಿರುವ ಭವನಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲು ಲೋಕಸಭಾ ಕಾರ್ಯಾಲಯ ನಿರ್ಧರಿಸಿದೆ.
'ಮುಂಬರುವ ಸಂಸತ್ ಸದಸ್ಯರಿಗೆ ಸಾಧ್ಯವಾದಷ್ಟು ಉತ್ತಮ ಸವಲತ್ತುಗಳನ್ನು ಹೊಂದಿರುವ 300ಕ್ಕೂ ಹೆಚ್ಚು ಕೊಠಡಿಗಳ ವ್ಯವಸ್ಥೆ ಮಾಡಲಾಗುವುದು. ರಾಷ್ಟ್ರ ರಾಜಧಾನಿಗೆ ಬಂದಾಗ ಸಂಸದರು ಯಾವುದೇ ಅನಾನುಕೂಲತೆ ಎದುರಾಗುವುದಿಲ್ಲ ಎಂದು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಸ್ನೇಹಲಾತಾ ಶ್ರೀವಾಸ್ತವ ತಿಳಿಸಿದ್ದಾರೆ.
ಹೊಸದಾಗಿ ಚುನಾಯಿತ ಸದಸ್ಯರನ್ನು ಪಶ್ಚಿಮ ಕೋರ್ಟ್ ವ್ಯಾಪ್ತಿ ಮತ್ತು ಹೊಸದಾಗಿ ನಿರ್ಮಿಸಲಾದ ವಿವಿಧ ರಾಜ್ಯಗಳ ಭವನಗಳಲ್ಲಿ ವಸತಿ ಸೌಕರ್ಯ ನೀಡಲಾಗುವುದು. ಹೋಟೆಲ್ಗಳಲ್ಲಿ ತಂಗುವ ಸಂಸದರ ಪ್ರಯಾಣಿಕ ವ್ಯವಸ್ಥೆಯನ್ನು ಇದು ದೂರವಾಗಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.