ನವದೆಹಲಿ: ಯಾವುದೇ ಉದ್ಯೋಗಿಯಲ್ಲಿ ಕೊರೊನಾ ಪತ್ತೆಯಾಗಿಲ್ಲ ಎಂದು ರಾಷ್ಟ್ರಪತಿ ಭವನವು ಸ್ಪಷ್ಟಪಡಿಸಿದೆ.
ಸೆಂಟ್ರಲ್ ದೆಹಲಿಯ ಕೊರೊನಾ ಸೋಂಕಿತ, ರಾಷ್ಟ್ರಪತಿಗಳ ಕಾರ್ಯದರ್ಶಿಯ ನೌಕರನಲ್ಲ ಅಥವಾ ಅಧ್ಯಕ್ಷರ ಎಸ್ಟೇಟ್ನ ನಿವಾಸಿಯೂ ಅಲ್ಲ. ಎಂದು ರಾಷ್ಟ್ರಪತಿಗಳ ಉಪ ಪತ್ರಿಕಾ ಕಾರ್ಯದರ್ಶಿ ನಿಮಿಶ್ ರುಸ್ತಗಿ ಹೇಳಿದ್ದಾರೆ.
ತನಿಖೆ ನಂತರ ರಾಷ್ಟ್ರಪತಿಗಳ ಕಾರ್ಯದರ್ಶಿಯ ನೌಕರರ ಕುಟುಂಬ ಸದಸ್ಯರೊಬ್ಬರು ಮೃತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಸಂಬಂಧಪಟ್ಟ ಉದ್ಯೋಗಿ ಪ್ರೆಸಿಡೆಂಟ್ ಎಸ್ಟೇಟ್ನ ಪಾಕೆಟ್ 1 ನಿವಾಸಿಯಾಗಿದ್ದಾರೆ.
ಮಾರ್ಗಸೂಚಿಗಳ ಪ್ರಕಾರ, ಈ ಕುಟುಂಬದ ಎಲ್ಲ ಏಳು ಸದಸ್ಯರನ್ನು ಏ.16 ರಂದು ಕ್ವಾರಂಟೈನ್ಗೆ ಒಳಪಟಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಕೆಟ್ 1, ಪ್ರೆಸಿಡೆಂಟ್ ಎಸ್ಟೇಟ್ನಲ್ಲಿ 115 ಮನೆಗಳಿಗೆ ನಿರ್ಬಂಧ ಹೇರಲಾಗಿದೆ. ನಿವಾಸಿಗಳನ್ನು ಮನೆಯೊಳಗೆ ಉಳಿಯುವಂತೆ ತಿಳಿಸಲಾಗಿದೆ. ಈ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ.
"ಇಲ್ಲಿಯವರೆಗೆ ರಾಷ್ಟ್ರಪತಿಗಳ ಸಚಿವಾಲಯದ ಯಾವುದೇ ಉದ್ಯೋಗಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ. ಸ್ಥಳೀಯ ಆಡಳಿತದ ಜೊತೆಗೆ ಸಚಿವಾಲಯವು ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಇಲ್ಲಿಯವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾಗೆ ಸಂಬಂಧಿಸಿದಂತೆ 47 ಸಾವುಗಳು ವರದಿಯಾಗಿವೆ.