ETV Bharat / bharat

ಶಿವಸೇನೆಗೆ ಕೈಕೊಟ್ಟ ಎನ್​​ಸಿಪಿ: ಮೈತ್ರಿ ಸರ್ಕಾರ ರಚನೆ ಬಗ್ಗೆ ಸೋನಿಯಾ ಜತೆ ಮಾತುಕತೆ ನಡೆದಿಲ್ಲ ಎಂದ ಪವಾರ್​​!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ದಿನದಿಂದ ದಿನಕ್ಕೆ ಮುಂದೂಡಿಕೆಯಾಗುತ್ತಿದ್ದು, ಇದೀಗ ಸೋನಿಯಾ ಗಾಂಧಿ ಭೇಟಿಯಾಗಿರುವ ಎನ್​ಸಿಪಿ ಮುಖಂಡ ಶರದ್​ ಪವಾರ್​ ಇನ್ನೊಂದು ರೀತಿ ಹೇಳಿಕೆ ನೀಡಿದ್ದಾರೆ.

ಶಿವಸೇನೆಗೆ ಕೈಕೊಟ್ಟ ಎನ್​​ಸಿಪಿ
author img

By

Published : Nov 19, 2019, 6:25 AM IST

ಮುಂಬೈ: ಮಹಾರಾಷ್ಟ್ರದಲ್ಲಿ ಎನ್​​ಸಿಪಿ+ಕಾಂಗ್ರೆಸ್​ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಶಿವಸೇನೆಗೆ ಇದೀಗ ದಿಢೀರ್​ ಶಾಕ್​ ಆಗಿದ್ದು, ಸೋನಿಯಾ ಗಾಂಧಿ ಜತೆ ತಾವು ಮೈತ್ರಿ ಸರ್ಕಾರ ರಚನೆ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಶರದ್​ ಪವಾರ್​ ಹೇಳಿಕೆ ನೀಡಿದ್ದಾರೆ.

ಶಿವಸೇನೆಯ 50: 50 ಸೂತ್ರಕ್ಕೆ ಬಿಜೆಪಿ ನಿರಾಕರಣೆ ಮಾಡುತ್ತಿದ್ದಂತೆ ಅದರೊಂದಿಗೆ ಹೊಂದಿದ್ದ ಸಂಬಂಧ ಕಳೆದುಕೊಂಡು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಶಿವಸೇನೆ ಈಗಾಗಲೇ ಕಾಂಗ್ರೆಸ್​ ಹಾಗೂ ಎನ್​​ಸಿಪಿ ಮುಖಂಡರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಿತ್ತು. ಆದರೆ ನಿನ್ನೆ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಮಾಡಿ ಸುಮಾರು ಗಂಟೆಗಳ ಕಾಲ ಚರ್ಚೆ ನಡೆಸಿರುವ ಎನ್​ಸಿಪಿ ಮುಖಂಡ ಶರದ್​ ಪವಾರ್​​, ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಕುರಿತು ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದಿದ್ದು, ಇಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

Sharad Pawar
ಶಿವಸೇನೆಗೆ ಕೈಕೊಟ್ಟ ಎನ್​​ಸಿಪಿ

ಇದೇ ವೇಳೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ವಿಚಾರವಾಗಿ ಮುಂದಿನ ಎರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಹಿಂದೆ ಚುನಾವಣೆಯಲ್ಲಿ ಶಿವಸೇನೆ+ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಅವುಗಳ ಹಾದಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದ ಶಿವಸೇನಗೆ ಇದೀಗ ಮತ್ತಷ್ಟು ಹಿನ್ನೆಡೆಯಾಗಿದೆ.

ಇದೇ ವೇಳೆ ಮಾತಮಾಡಿರುವ ಶಿವಸೇನೆ ಮುಖಂಡ ಸಂಜಯ್​ ರಾವತ್​,ಆದಷ್ಟು ಬೇಗ ಶಿವಸೇನೆ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸಚಿವ ರಾಮದಾಸ್​ ಅಠವಾಳೆ ಮಾತ್ರ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದು, ನಾನು ಈಗಾಗಲೇ ರಾವತ್ ಜತೆ ಮಾತನಾಡಿದ್ದು, ಮಹಾರಾಷ್ಟ್ರದಲ್ಲಿ ಮೂರು ವರ್ಷ ಬಿಜೆಪಿ ಸಿಎಂ ಹಾಗೂ ಎರಡು ವರ್ಷ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಆಫರ್​ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Intro:Body:

ಶಿವಸೇನೆಯ 50: 50 ಸೂತ್ರಕ್ಕೆ ಬಿಜೆಪಿ ನಿರಾಕರಣೆ ಮಾಡುತ್ತಿದ್ದಂತೆ ಅದರೊಂದಿಗೆ ಹೊಂದಿದ್ದ ಸಂಬಂಧ ಕಳೆದುಕೊಂಡು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಶಿವಸೇನೆ ಈಗಾಗಲೇ ಕಾಂಗ್ರೆಸ್​ ಹಾಗೂ ಎನ್​​ಸಿಪಿ ಮುಖಂಡರೊಂದಿಗೆ ಅನೇಕ ಸುತ್ತಿನ ಮಾತುಕತೆ ಸಹ ನಡೆಸಿತ್ತು. ಆದರೆ ನಿನ್ನೆ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಮಾಡಿ ಸುಮಾರು ಗಂಟೆಗಳ ಕಾಲ ಚರ್ಚೆ ನಡೆಸಿರುವ ಎನ್​ಸಿಪಿ ಮುಖಂಡ ಶರದ್​ ಪವಾರ್​​, ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಕುರಿತು ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದಿದ್ದು, ಇಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ. 

ಇದೇ ವೇಳೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ವಿಚಾರವಾಗಿ ಮುಂದಿನ ಎರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಹಿಂದೆ ಚುನಾವಣೆಯಲ್ಲಿ ಶಿವಸೇನೆ+ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಅವುಗಳ ಹಾದಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದ ಶಿವಸೇನಗೆ ಇದೀಗ ಮತ್ತಷ್ಟು ಹಿನ್ನೆಡೆಯಾಗಿದೆ. 

ಇದೇ ವೇಳೆ ಮಾತಮಾಡಿರುವ ಶಿವಸೇನೆ ಮುಖಂಡ ಸಂಜಯ್​ ರಾವತ್​,ಆದಷ್ಟು ಬೇಗ ಶಿವಸೇನೆ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸಚಿವ ರಾಮದಾಸ್​ ಅಠವಾಳೆ ಮಾತ್ರ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದು, ನಾನು ಈಗಾಗಲೇ ರಾವತ್ ಜತೆ ಮಾತನಾಡಿದ್ದು, ಮಹಾರಾಷ್ಟ್ರದಲ್ಲಿ ಮೂರು ವರ್ಷ ಬಿಜೆಪಿ ಸಿಎಂ ಹಾಗೂ ಎರಡು ವರ್ಷ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಆಫರ್​ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.