ನವದೆಹಲಿ : ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ನಿರ್ದಿಷ್ಟ ಸಮುದಾಯ'ವನ್ನು ಗುರಿಯಾಗಿಸಿಕೊಂಡಿದೆ ಎಂದು ಕೆಲ ರಾಜಕೀಯ ಪಕ್ಷಗಳು ಮತ್ತು ಎನ್‌ಜಿಒಗಳು ತಮ್ಮ ಮೇಲೆ ಹೊರಿಸಿರುವ ಆರೋಪಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ ಸ್ಥಳೀಯ ಪೊಲೀಸರು 164 ಜನರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ರೆ, ಇತರ 41 ಜನರನ್ನು (ಎಲ್ಲಾ ಹಿಂದೂಗಳು) ಅಪರಾಧ ವಿಭಾಗದಿಂದ ಚಾರ್ಜ್‌ಶೀಟ್ ಮಾಡಲಾಗಿದೆ. ಅದರಂತೆ ಮುಸ್ಲಿಂ ಸಮುದಾಯದ 142 ಜನರ ಮೇಲೆ ಸ್ಥಳೀಯ ಪೊಲೀಸರು ಆರೋಪ ಹೊರಿಸಿದ್ರೆ, ಇತರ 63 ಮಂದಿಯನ್ನು ಕ್ರೈಂ ಬ್ರ್ಯಾಂಚ್ ಆರೋಪಿಸಿದೆ. ಜೂನ್ 5 ರವರೆಗೆ ದೆಹಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡೂ ಸಮುದಾಯದ ತಲಾ 205 ಜನರ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಫೆಬ್ರವರಿ 24ರಂದು ಈಶಾನ್ಯ ದೆಹಲಿಯಲ್ಲಿ ಕೋಮು ಸಂಘರ್ಷ ಭುಗಿಲೆದ್ದಿತ್ತು. ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರದಿಂದಾಗಿ ಕನಿಷ್ಠ 53 ಜನರು ಸಾವನ್ನಪ್ಪಿದ್ರೆ, ಸುಮಾರು 200 ಜನ ಗಾಯಗೊಂಡಿದ್ದರು.