ನವದೆಹಲಿ : ಕೋವಿಡ್-19 ವಂಚನೆ ಮತ್ತು ಹಗರಣಗಳಿಗೆ ಸಂಬಂಧಿಸಿದಂತೆ 'ಫಿಶಿಂಗ್ ಅಭಿಯಾನ'ದಡಿ ಜೂನ್ 21ರಂದು ಭಾರತ ಸೇರಿ 6 ರಾಷ್ಟ್ರಗಳ ಇ-ಮೇಲ್‌ಗಳ ಮೇಲೆ ಉತ್ತರ ಕೊರಿಯಾದ ಹ್ಯಾಕರ್‌ಗಳು ಬೃಹತ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ.
ಜೆಡ್ಡಿ ನೆಟ್ ವರದಿಯ ಪ್ರಕಾರ, ಭಾರತ, ಸಿಂಗಾಪುರ, ದಕ್ಷಿಣ ಕೊರಿಯಾ, ಜಪಾನ್, ಯುಕೆ ಮತ್ತು ಯುಎಸ್ ಹ್ಯಾಕರ್ಗಳ ಗಾಳಕ್ಕೆ ಸಿಲುಕಲಿರುವ ದೇಶಗಳು. ಈ ದಾಳಿ ಲಾಜರಸ್ ಗ್ರೂಪ್‌ನ ದೊಡ್ಡ-ಪ್ರಮಾಣದ ಅಭಿಯಾನದ ಒಂದು ಭಾಗ. ಸಣ್ಣ ಮತ್ತು ದೊಡ್ಡ ಉದ್ಯಮಗಳು ಸೇರಿ ಆರು ದೇಶಗಳಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಮತ್ತು ಅವರ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ.
ಆರ್ಥಿಕವಾಗಿ ಲಾಭ ಗಳಿಸಲು ಉತ್ತರ ಕೊರಿಯಾದ ಹ್ಯಾಕರ್ಸ್ ಗುಂಪು ಪ್ರಯತ್ನಿಸುತ್ತಿದೆ. ಉದ್ದೇಶಿತ ಇ-ಮೇಲ್ ಮತ್ತು ಮೋಸದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗುತ್ತದೆ. ಅವರ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸುವಂತೆ ಹ್ಯಾಕರ್ಸ್ ಆಮಿಷವೊಡ್ಡಲಿದೆ ಎಂದು ಸಿಂಗಾಪುರ ಪ್ರಧಾನ ಕಚೇರಿ ಸೈಬರ್ ಸೆಕ್ಯುರಿಟಿ ಮಾರಾಟಗಾರ ಸೈಫಿರ್ಮಾ ಸಂಸ್ಥೆ ಹೇಳಿದೆ.
ಜಪಾನ್ನ 11 ಲಕ್ಷ ವೈಯಕ್ತಿಕ ಇಮೇಲ್ ಐಡಿಗಳನ್ನು ಭಾರತದಲ್ಲಿ 20 ಲಕ್ಷ ಮತ್ತು ಯುಕೆ 1,80,000 ವ್ಯಾಪಾರ ಸಂಪರ್ಕಗಳ ವಿವರಗಳನ್ನು ಲಾಜರಸ್ ಹ್ಯಾಕರ್ಸ್ ಹ್ಯಾಕ್ ಮಾಡಲಿದ್ದಾರೆ. ಅಲ್ಲದೆ ಸಿಂಗಾಪುರದ 8,000 ಸಂಸ್ಥೆಗಳೂ ಒಳಗೊಂಡಿವೆ. ಇಮೇಲ್ ಟೆಂಪ್ಲೇಟ್‌ನಲ್ಲಿ ಹೈಲೈಟ್ ಮಾಡಲಾದ ವ್ಯಾಪಾರ ಸಂಪರ್ಕಗಳನ್ನು ಹ್ಯಾಕ್ ಮಾಡುವ ಕುರಿತು ಸಿಂಗಾಪುರ್ ಬ್ಯುಸಿನೆಸ್ ಫೆಡರೇಶನ್ (ಎಸ್‌ಬಿಎಫ್) ಎಚ್ಚರಿಸಿದೆ.
ಎಸ್‌ಬಿಎಫ್ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು 2001ರಲ್ಲಿ ಪರಿಚಯಿಸಿದೆ. ಅದು ಸಿಂಗಾಪುರ ವ್ಯವಹಾರಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ 27,200 ಕಂಪನಿಗಳನ್ನು ಪ್ರತಿನಿಧಿಸುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತೀಯ ಎಟಿಎಂಗಳಿಗೆ ಒಳನುಸುಳಲು ಮತ್ತು ಗ್ರಾಹಕರ ಕಾರ್ಡ್ ಡೇಟಾವನ್ನು ಕದಿಯಲು ರಚಿಸಲಾದ ಮಾಲ್‌ವೇರ್ ಕ್ಯಾಸ್ಪರ್ಸ್ಕಿ ಭದ್ರತಾ ಸಂಶೋಧಕರು ಲಾಜರಸ್ ಗುಂಪು ಪತ್ತೆಗೆ ಮುಂದಾಗಿದ್ದಾರೆ.