ETV Bharat / bharat

ನ.24ರಂದು ತಮಿಳುನಾಡಿಗೆ ಅಪ್ಪಳಿಸಲಿದೆ ನಿವಾರ್​: ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ - India Meteorological Department

ನ.24ರಂದು ತಮಿಳುನಾಡಿಗೆ ನಿವಾರ್​ ಚಂಡಮಾರುತ ಅಪ್ಪಳಿಸಲಿದ್ದು, ಇದರ ಗಾಳಿಯ ವೇಗ ಗಂಟೆಗೆ 120 ಕಿಲೋಮೀಟರ್ ಇರಲಿದೆ.ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಇಂದು ಸಂಜೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಭಾರತದ ಹವಾಮಾನ ಇಲಾಖೆ
ಭಾರತದ ಹವಾಮಾನ ಇಲಾಖೆ
author img

By

Published : Nov 23, 2020, 10:39 PM IST

ತಮಿಳುನಾಡು: ನಿವಾರ್​ ಚಂಡಮಾರುತದ ಪರಿಣಾಮ ನ.24ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಜೊತೆಗೆ ನ.25ರಂದು ಪಾಂಡಿಚೇರಿ ಬಳಿಯ ಕರಾವಳಿಯಲ್ಲಿ ಭೂಕುಸಿತವಾಲಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.

ಗಾಳಿಯ ವೇಗ ಗಂಟೆಗೆ 120 ಕಿಲೋಮೀಟರ್ ಇರಲಿದೆ ಎಂದು ನೀರೀಕ್ಷಿಸಲಾಗಿದೆ. ಈ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಇಂದು ಸಂಜೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ಸೂಚನೆಗಳನ್ನು ನೀಡಿದ್ದಾರೆ.

ಕಂದಾಯ, ಸ್ಥಳೀಯ ಆಡಳಿತ, ಅಗ್ನಿಶಾಮಕ, ಹೆದ್ದಾರಿ, ವಿದ್ಯುತ್ ಮಂಡಳಿ, ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ರಕ್ಷಣಾ ತಂಡವು ಚಂಡಮಾರುತದಿಂದ ಹಾನಿಯಾಗುವ ಸ್ಥಳಗಳಿಗೆ ಹೋಗಬೇಕು ಎಂದಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶದ ಜನರು ಮತ್ತು ಅಸುರಕ್ಷಿತ ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ತಕ್ಷಣವೇ ವಸತಿ ಶಿಬಿರಗಳಿಗೆ ಕರೆದೊಯ್ಯಬೇಕು. ಈ ಶಿಬಿರಗಳು ಸಾಕಷ್ಟು ಕುಡಿಯುವ ನೀರಿನ ಸೌಲಭ್ಯ, ಆಹಾರ, ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿರಬೇಕು ಎಂದು ಸೂಚನೆ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಪುದುಕೋಟೈ, ನಾಗಪಟ್ಟಣಂ, ತಂಜಾವೂರು, ತಿರುವರೂರು, ಕಡಲೂರು, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಬಸ್ ಸೇವೆಗಳನ್ನು ಮುಂದಿನ ಆದೇಶದವರೆಗೆ 24.11.2020 ರಂದು ಮಧ್ಯಾಹ್ನ 1.00 ರಿಂದ ಸ್ಥಗಿತಗೊಳಿಸಲಾಗುತ್ತದೆ. ಜನರು ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಇತರೆ ಕೆಲಸಗಳಿಗೆ ತಮ್ಮ ಸ್ವಂತ ವಾಹನಗಳೊಂದಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು. ಮೀನುಗಾರರಿಗೂ ಸಮುದ್ರದಿಂದ ದೂರವಿರಲು ಸೂಚಿಸಲಾಗಿದೆ.ಎನ್‌ಡಿಆರ್‌ಎಫ್‌ನ ಆರು ತಂಡಗಳನ್ನು ಕಡಲೂರು ಜಿಲ್ಲೆಗೆ ಮತ್ತು ಎರಡು ತಂಡಗಳನ್ನು ಚೆನ್ನೈಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.