ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಅಪರಾಧಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದೀಗ ಅದೇ ಅರ್ಜಿಯ ವಿಚಾರಣೆಯನ್ನು ಜನವರಿ 20 ರಂದು ಸುಪ್ರೀಂಕೋರ್ಟ್ ನಡೆಸಲಿದೆ.
ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ, 2012 ರಲ್ಲಿ ಘಟನೆ ನಡೆದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ನಿನ್ನೆ ಅಪೆಕ್ಸ್ ಕೋರ್ಟ್ಗೆ 'ಸ್ಪೆಷಲ್ ಲೀವ್ ಪಿಟಿಷನ್' (SLP) ಸಲ್ಲಿಸಿದ್ದಾನೆ. ನ್ಯಾ.ಆರ್ ಬಾನುಮತಿ ನೇತೃತ್ವದಲ್ಲಿ ಮೂವರು ನ್ಯಾಯಧೀಶರ ಪೀಠ ಹಾಗೂ ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ. ಎ ಎಸ್ ಬೋಪಣ್ಣ ಜನವರಿ 20 ರಂದು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
-
2012 Delhi gang-rape case: Supreme Court will hear on 20th Jan, the Special Leave Petition (SLP) filed by Pawan, one of the convicts, claiming that he was a juvenile at the time of crime, and the Delhi High Court had ignored this fact. pic.twitter.com/yydZKJ7rh3
— ANI (@ANI) January 18, 2020 " class="align-text-top noRightClick twitterSection" data="
">2012 Delhi gang-rape case: Supreme Court will hear on 20th Jan, the Special Leave Petition (SLP) filed by Pawan, one of the convicts, claiming that he was a juvenile at the time of crime, and the Delhi High Court had ignored this fact. pic.twitter.com/yydZKJ7rh3
— ANI (@ANI) January 18, 20202012 Delhi gang-rape case: Supreme Court will hear on 20th Jan, the Special Leave Petition (SLP) filed by Pawan, one of the convicts, claiming that he was a juvenile at the time of crime, and the Delhi High Court had ignored this fact. pic.twitter.com/yydZKJ7rh3
— ANI (@ANI) January 18, 2020
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರಾಧಿ ಪರ ವಕೀಲ ಎ.ಪಿ. ಸಿಂಗ್, ಶಾಲಾ ದಾಖಲೆಗಳ ಪ್ರಕಾರ ಪವನ್ ಗುಪ್ತಾ ಜನ್ಮದಿನಾಂಕ 1996 ರ ಅಕ್ಟೋಬರ್ 8 ಆಗಿದ್ದು, ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಇದನ್ನು ನಿರಾಕರಿಸಿತ್ತು ಎಂದು ಹೇಳಿದ್ದಾರೆ.
ಇನ್ನು ನಿನ್ನೆಯಷ್ಟೇ ಪ್ರಕರಣದ ಅಪರಾಧಿಗಳಾದ ವಿನಯ್ ಶರ್ಮಾ(26), ಮುಖೇಶ್ ಕುಮಾರ್ (32), ಅಕ್ಷಯ್ ಕುಮಾರ್ ಸಿಂಗ್ (31) ಹಾಗೂ ಪವನ್ ಗುಪ್ತಾ (25)ಗೆ ದೆಹಲಿ ಕೋರ್ಟ್ ಹೊಸದಾಗಿ ಡೆತ್ ವಾರೆಂಟ್ ನೀಡಿದ್ದು, ಫೆ.1 ರಂದು ಗಲ್ಲು ಶಿಕ್ಷೆ ನಿಗಧಿಯಾಗಿದೆ.