ನವದೆಹಲಿ: ಮೀರತ್ ಕಾರಾಗೃಹದ ಹ್ಯಾಂಗ್‌ಮ್ಯಾನ್ ಪವನ್ ಜಲ್ಲಾಡ್ ಅವರು ನಿರ್ಭಯಾ ಪ್ರಕರಣದ ಆರೋಪಿಗಳ ಮರಣದಂಡನೆಯ ಅಣುಕು ಪ್ರದರ್ಶನವನ್ನು ತಿಹಾರ್ ಜೈಲು ಆವರಣದಲ್ಲಿ ಶುಕ್ರವಾರ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವನ್ ಜಲ್ಲಾಡ್ ನಡೆಸಿದ ಮರದಂಡನೆಯ ಅಭ್ಯಾಸ ಸರಾಗವಾಗಿ ನಡೆಯಿತು ಎಂದು ಕಾರಾಗೃಹದ ಅಧಿಕಾರಿ ಸಂದೀಪ್ ಗೋಯೆಲ್ ತಿಳಿಸಿದರು.
ನಾಳೆ ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸುವ ಸಮಯ ನಿಗದಿಯಾಗಿತ್ತು. ಆದರೆ ಈಗ ಅದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪವನ್ ಜೈಲಿನ ಆವರಣದಲ್ಲಿಯೇ ಇದ್ದು, ಹಗ್ಗದ ಬಲ ಮತ್ತು ಮರಣದಂಡನೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ಪರಿಶೀಲಿಸಲಿದ್ದಾರೆ.
ಆದರೆ, ಅವರಲ್ಲಿ ಒಬ್ಬ ಆರೋಪಿ ಬುಧವಾರ ರಾಷ್ಟ್ರಪತಿಗಳ ಮುಂದೆ ಕರುಣೆ ಅರ್ಜಿಯನ್ನು ಸಲ್ಲಿಸಿದ್ದರಿಂದ ಅವರ ಮರಣದಂಡನೆ ಸಂಭವಿಸುವ ಸಾಧ್ಯತೆಯಿಲ್ಲ. ಮತ್ತೊಬ್ಬ ಆರೋಪಿ ಸುಪ್ರೀಂ ಕೋರ್ಟ್ ಮುಂದೆ ಪರಿಹಾರಾತ್ಮಕ ಅರ್ಜಿಯನ್ನು ಸಲ್ಲಿಸಿದ್ದರು. ಅದೂ ಈಗ ಸುಪ್ರೀಂಕೋರ್ಟ್ನಿಂದ ವಜಾ ಆಗಿದೆ. ಆರೋಪಿಗಳ ಗಲ್ಲು ಶಿಕ್ಷೆ ದಿನವೂ ಮುಂದೆ ಹೋಗಿದೆ.