ETV Bharat / bharat

ನಿರ್ಭಯಾ ಅಪರಾಧಿ ಮರಣದಂಡನೆ ಶಿಕ್ಷೆ ರದ್ದು ವಿಚಾರ: ಆದೇಶ ತಡೆಹಿಡಿದ ದೆಹಲಿ ಕೋರ್ಟ್ - ದೆಹಲಿ ಕೋರ್ಟ್

ನಿರ್ಭಯಾ ಅಪರಾಧಿ ಮುಖೇಶ್​ ಸಿಂಗ್​ನನ್ನು 2012ರ ಡಿ.17 ರಂದು ರಾಜಸ್ಥಾನದಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಯಿತು. ಅತ್ಯಾಚಾರ ನಡೆದ ದಿನ, ಅಂದರೆ ಡಿ.16 ರಂದು ಆತ ಘಟನೆ ನಡೆದ ಸ್ಥಳದಲ್ಲೇ ಇರಲಿಲ್ಲ. ಹೀಗಾಗಿ ಈತನ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ.

nirbhaya
ನಿರ್ಭಯಾ ಅಪರಾಧಿ
author img

By

Published : Mar 17, 2020, 3:50 PM IST

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್​ನ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವ ವಿಚಾರವಾಗಿ ದೆಹಲಿ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಅಪರಾಧಿ ಮುಖೇಶ್​ ಸಿಂಗ್​ನನ್ನು 2012ರ ಡಿ.17 ರಂದು ರಾಜಸ್ಥಾನದಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಯಿತು. ಅತ್ಯಾಚಾರ ನಡೆದ ದಿನ, ಅಂದರೆ ಡಿ.16 ರಂದು ಆತ ಘಟನೆ ನಡೆದ ಸ್ಥಳದಲ್ಲೇ ಇರಲಿಲ್ಲ. ಹೀಗಾಗಿ ಮುಖೇಶ್​ನ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಅಪರಾಧಿ ಪರ ವಕೀಲ ದೆಹಲಿ ಕೋರ್ಟ್​ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ತಿಹಾರ್​ ಜೈಲು ಒಳಗಡೆ ಆತನಿಗೆ ಹಿಂಸೆ ನೀಡಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ನಿರ್ಭಯಾ ಪರ ವಕೀಲರು, ಅಪರಾಧಿಯ ಈ ಅರ್ಜಿ ನಿಷ್ಪ್ರಯೋಜಕ ಮತ್ತು ಗಲ್ಲಿಗೇರಿಸುವಿಕೆಯನ್ನು ವಿಳಂಬಗೊಳಿಸುವ ಒಂದು ತಂತ್ರ ಎಂದು ಹೇಳಿದ್ದಾರೆ. ಸದ್ಯ ಮುಖೇಶ್ ಸಿಂಗ್​ನ ಮರಣದಂಡನೆ ಶಿಕ್ಷೆಯನ್ನು ರದ್ದು ವಿಚಾರದ ಆದೇಶವನ್ನು ಕೋರ್ಟ್​ ಕಾಯ್ದಿರಿಸಿದ್ದು, ಶೀಘ್ರದಲ್ಲೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಆದೇಶ ನೀಡಲಿದ್ದಾರೆ.

ಇನ್ನು ಈಗಾಗಲೇ ಮಾ.20ರ ಬೆಳಗ್ಗೆ 5.30ಕ್ಕೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನಿಗದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.