ಜಗ್ತಿಯಲ್: ಆನ್‌ಲೈನ್ ತರಗತಿಗೆ ಮೊಬೈಲ್ ಫೋನ್ ಕೊಡಿಸದ ಕಾರಣ ತೆಲಂಗಾಣದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿ ತನ್ನ ಪೋಷಕರು ಮೊಬೈಲ್ ಫೋನ್ ಖರೀದಿಸಲು ವಿಫಲವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಗ್ತಿಯಲ್ ಜಿಲ್ಲೆಯ ಕೋಡಿಮಯಾಲ ವಲಯದ ತಿರ್ಮಲಾಪುರ ಗ್ರಾಮದ ರಘು ಪ್ರಸಾದ್ ಎಂಬ ಹುಡುಗ ಆನ್‌ಲೈನ್ ತರಗತಿಗಳಿಗೆ ಫೋನ್ ಖರೀದಿಸುವಂತೆ ಪೋಷಕರನ್ನು ಕೇಳಿಕೊಂಡಿದ್ದ. ಆದರೆ, ಪೋಷಕರು ಹೊಸ ಫೋನ್ ಅನ್ನು ದಸರಾ ಹಬ್ಬದಲ್ಲಿ ಕೊಡಿಸಲಾಗಿರಲಿಲ್ಲ. ಸದ್ಯಕ್ಕೆ ಮನೆಯಲ್ಲಿದ್ದ ಹಳೆಯ ಫೋನ್ ಒಂದನ್ನೇ ನೀಡಿದ್ದರು. ಆದ್ದರಿಂದ ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ತಿಳಿಸಿದ್ದರು.
ರಘು ಪ್ರಸಾದ್ ದಸರಾ ಹಬ್ಬ ಬಂದಿತು, ಫೋನ್ ಖರೀದಿಸುವಂತೆ ಪೋಷಕರಲ್ಲಿ ಕೇಳಿಕೊಂಡ. ಆದರೆ ಹತ್ತಿ, ಮಾರಾಟ ಮಾಡಿದ ನಂತರ ಬಂದ ಹಣದಿಂದ ಹೊಸ ಫೋನ್ ಖರೀದಿಸುವುದಾಗಿ ತಂದೆ ಹೇಳಿದರು. ಇದರಿಂದ ಅಸಮಾಧಾನಗೊಂಡ ರಘು, ಮನೆಯಲ್ಲಿ ಯಾರೂ ಇಲ್ಲದ ವೇಳೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.