ಕೊಲ್ಲಂ(ಕೇರಳ): ಕೊಲ್ಲಂನ ಕುಳತುಪುಜದಲ್ಲಿ ಪತ್ತೆಯಾದ ಪಾಕಿಸ್ತಾನ ತಯಾರಿಸಿದವು ಎನ್ನಲಾದ 14 ಗುಂಡುಗಳ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್, ರಾ(raw) ಮತ್ತು ಎನ್ಐಎ ಮಾಹಿತಿ ಕಲೆಹಾಕಲು ಮುಂದಾಗಿವೆ.
ಈ ಬುಲೆಟ್ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಮಲಯಾಳಂ ಪತ್ರಿಕೆಯೊಂದರಲ್ಲಿ ಸುತ್ತಿ ಇಡಲಾಗಿತ್ತು. ಈ ಘಟನೆಯ ಬಗ್ಗೆ ಭಯೋತ್ಪಾದನಾ ನಿಗ್ರಹ ದಳವೂ ತನಿಖೆ ನಡೆಸಲಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಮಾಹಿತಿ ನೀಡಿದ್ದಾರೆ.
ಇವು ಸಶಸ್ತ್ರ ಪಡೆಗಳು ಬಳಸಿದ ಗುಂಡುಗಳಾಗಿವೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ಗುಂಡುಗಳು ಕೊಲ್ಲಂನ ಗಡಿಭಾಗದ ಅರಣ್ಯದಲ್ಲಿರುವ ಕುಳತುಪುಜದಲ್ಲಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದ್ದವು.