ETV Bharat / bharat

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆಗಿದ್ದು ಎರಡೇ ದಿನ: ಆತ್ಮಹತ್ಯೆಗೆ ಶರಣಾದ ವಧು! - ಉತ್ತರಪ್ರದೇಶ ಮುಜಾಫರನಗರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡೇ ದಿನಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Woman commits suicide
Woman commits suicide
author img

By

Published : Jul 2, 2020, 3:17 PM IST

ಮುಜಾಫರನಗರ (ಯುಪಿ): ಕಳೆದೆರೆಡು ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಧು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಮುಜಾಫರನಗರದಲ್ಲಿ ನಡೆದಿದೆ.

newly married commits suicide in UP
ಘಟನಾ ಸ್ಥಳದಲ್ಲಿ ದೊರೆತ ಸೂಸೈಡ್​ ನೋಟ್​

ಸಚಿನ್​ ಎಂಬ 22 ವರ್ಷದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ 21 ವರ್ಷದ ಯುವತಿ ನೇಹಾ, ಗಂಡನ ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎರಡೂ ಕುಟುಂಬದವರ ಒಪ್ಪಿಗೆಯ ಮೇರೆಗೆ ಈ ಮದುವೆ ನಡೆದಿತ್ತು ಎಂಬ ಮಾಹಿತಿ ದೊರೆತಿದೆ. ಆದರೆ ದಿಢೀರ್​ ಬೆಳವಣಿಗೆಯಲ್ಲಿ ವಧು ಸಾವಿನ ಹಾದಿ ತುಳಿದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈಕೆ ಸಾವನ್ನಪ್ಪಿರುವ ಸ್ಥಳದಲ್ಲಿ ಮರಣ ಪತ್ರ​ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ. ನಮ್ಮ ಮನೆಯವರೆಲ್ಲರೂ ನಿರ್ದೋಷಿಗಳೆಂದು ಬರೆದಿದ್ದಾಳೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.