ETV Bharat / bharat

ಛೇ ಇದೆಂಥಾ ವಿಕೃತಿ... ಚಿಕಿತ್ಸೆ ನೀಡದೆ ಅಲೆದಾಡಿಸಿದ ವೈದ್ಯರು, ಮೆಟ್ಟಿಲ ಮೇಲೆ ಕಣ್ಮುಚ್ಚಿತು 4ದಿನದ ಹಸುಳೆ! - undefined

ಉಸಿರಾಟದ ತೊಂದರೆಯಿದ್ದ ಮಗುವನ್ನು ಕೂಡಲೆ ಅಡ್ಮಿಟ್​ ಮಾಡಿಕೊಳ್ಳದೇ, ಅಲ್ಲಿಂದಿಲ್ಲಿಗೆ ಪೋಷಕರನ್ನು ಅಲೆದಾಡಿಸಿದ್ದರಿಂದಲೇ ಮಗು ಮೃತಪಟ್ಟಿತು ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಒಬ್ಬ ಡಾಕ್ಟರ್​ನನ್ನು ಅಮಾನತು ಮಾಡಿದ್ದು, ಉಳಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದೆ.

BAREILLY
author img

By

Published : Jun 20, 2019, 12:55 PM IST

Updated : Jun 20, 2019, 2:21 PM IST

ಲಖನೌ: ಸರ್ಕಾರಿ ವೈದ್ಯರ ಗಾಢ ನಿರ್ಲಕ್ಷ್ಯದಿಂದ 4 ದಿನಗಳ ಹಸುಳೆ ಆಸ್ಪತ್ರೆಯ ಮೆಟ್ಟಿಲ ಮೇಲೆ ಕೊನೆಯುಸಿರೆಳೆದ ದಾರುಣ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉಸಿರಾಟದ ತೊಂದರೆಯಿದ್ದ ಮಗುವನ್ನು ಕೂಡಲೆ ಅಡ್ಮಿಟ್​ ಮಾಡಿಕೊಳ್ಳದೇ, ಅಲ್ಲಿಂದಿಲ್ಲಿಗೆ ಪೋಷಕರನ್ನು ಅಲೆದಾಡಿಸಿದ್ದರಿಂದಲೇ ಮಗು ಮೃತಪಟ್ಟಿತು ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಒಬ್ಬ ಡಾಕ್ಟರ್​ನನ್ನು ಅಮಾನತು ಮಾಡಿದ್ದು, ಉಳಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದೆ.

ಏನೀ ಪ್ರಕರಣದ ಹಿನ್ನೆಲೆ:

ಜೂನ್ 15ರಂದು ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಊರ್ವಶಿ ಎಂದು ಹೆಸರು ಸಹ ಇಡಲಾಗಿತ್ತು. ನಿನ್ನೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೆ ನಾವು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ, ಪುರುಷರ ವಿಭಾಗ ಸಿಬ್ಬಂದಿ ಮಹಿಳಾ ವಿಭಾಗಕ್ಕೆ ಕೊಂಡೊಯ್ಯುವಂತೆ ಹೇಳಿದರು. ಮಹಿಳಾ ವಿಭಾಗಕ್ಕೆ ಕರೆದೊಯ್ದರೆ ಹಾಸಿಗೆ ಇಲ್ಲವೆಂದು ಹೇಳಿ, ಮತ್ತೆ ಪುರುಷರ ವಿಭಾಗಕ್ಕೆ ಕಳಿಸಿದರು. ಮೂರು ಗಂಟೆಗಳ ಕಾಲ ಹೀಗೆ ಅಲೆದಾಡಿಸಿದ್ದರಿಂದ ಮನೆಗೆ ವಾಪಸಾಗಲು ಮುಂದಾದವು. ಆದರೆ ಮೆಟ್ಟಿಲುಗಳನ್ನು ಇಳಿಯುವಾಗಲೇ ಮಗು ಕಣ್ಮುಚ್ಚಿತು ಎಂದು ತಾಯಿ ದುಃಖದಿಂದ ಹೇಳಿಕೊಂಡಿದ್ದಾರೆ.

  • CM Yogi Adityanath has ordered departmental proceedings against Dr Alka Sharma & suspended Dr Kamlemdra Swaroop Gupta, both Chief Medical Superintendents (CMS) of Men & Women wings of Maharana Pratap District Hospital, Bareilly respectively, for negligence of duty.(1/2)(file pic) pic.twitter.com/fivKbgNdQ4

    — ANI UP (@ANINewsUP) June 19, 2019 " class="align-text-top noRightClick twitterSection" data=" ">

ಪುರುಷರ ವಿಭಾಗದ ಇನ್​ಚಾರ್ಜ್​ ಡಾ. ಕಮಲೇಂದ್ರ ಸ್ವರೂಪ್​ ಗುಪ್ತ ಹಾಗೂ ಮಹಿಳಾ ವಿಭಾಗದ ಇನ್​ಚಾರ್ಜ್​ ಡಾ. ಅಲ್ಕಾ ಶರ್ಮ ಇಬ್ಬರೂ ಮಗುವಿನ ಸಾವಿನ ಹೊಣೆ ಹೊತ್ತುಕೊಳ್ಳಲು ನಿರಾಕರಿಸಿದ್ದಾರೆ. ಒಬ್ಬರ ಮೇಲೊಬ್ಬರು ಆರೋಪ ಸಹ ಮಾಡಿದ್ದಾರೆ.

  • Bareilly: CMS of the Men wing of the hospital, Dr Kamlemdra Swaroop Gupta allegedly didn't admit a child who was in a critical condition and sent her to Women's wing of the hospital, whose CMS Dr Alka Sharma allegedly referred her back to Men's wing. The child later died. (2/2) https://t.co/y6jwleCE9L

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು, ಪುರುಷ ವಿಭಾಗದ ಇನ್​ಚಾರ್ಜ್​ ಅಮಾನತಿಗೆ ಆದೇಶಿಸಿ, ಉಳಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದಾರೆ.

Intro:Body:

BAREILLY

Conclusion:
Last Updated : Jun 20, 2019, 2:21 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.