ETV Bharat / bharat

ಫ್ರಾನ್ಸ್​ನಿಂದ ಹೊರಟ ರಫೇಲ್​​ ಫೈಟರ್ ಜೆಟ್​ಗಳು: ಜು.29ಕ್ಕೆ ಸೇನೆಗೆ ಅಧಿಕೃತ ಸೇರ್ಪಡೆ..!

ಫ್ರಾನ್ಸ್​ನಿಂದ ಭಾರತಕ್ಕೆ ರಫೇಲ್​ ಯುದ್ಧ ವಿಮಾನಗಳು ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಜುಲೈ 29ಕ್ಕೆ ಭಾರತೀಯ ವಾಯುಪಡೆಗೆ ಫೈಟರ್​​ ಜೆಟ್​ಗಳು ಸೇರ್ಪಡೆಯಾಗಲಿವೆ.

Rafales
ರಫೇಲ್​​
author img

By

Published : Jul 27, 2020, 12:46 PM IST

Updated : Jul 27, 2020, 1:00 PM IST

ನವದೆಹಲಿ: ಮೊದಲ ಬ್ಯಾಚ್​ನ ಐದು ರಫೇಲ್​ ಜೆಟ್​ಗಳು ಫ್ರಾನ್ಸ್​ನಿಂದ ಹೊರಟಿದ್ದು, ಜುಲೈ 29ರ ಬುಧವಾರ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ.

2016ರ ಒಪ್ಪಂದದಂತೆ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 36 ಫೈಟರ್ ಜೆಟ್​ಗಳಿಗೆ ಭಾರತ ಫ್ರಾನ್ಸ್​​ಗೆ ಬೇಡಿಕೆಯಿಟ್ಟಿತ್ತು. ಈಗ ಮೊದಲ ಬ್ಯಾಚ್​​​ನ 5 ರಫೇಲ್​ ಫೈಟರ್​ ಜೆಟ್​​ಗಳನ್ನು ಫ್ರಾನ್ಸ್​ ನೀಡುತ್ತಿದ್ದು, ಇದರ ಜೊತೆಗೆ ಭಾರತೀಯ ವಾಯುಪಡೆಯ 12 ಪೈಲಟ್​​ಗಳಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ.

ಹರಿಯಾಣದ ಅಂಬಾಲಕ್ಕೆ ತೆರಳುವ ಮೊದಲು ಅರಬ್​ ಎಮಿರೇಟ್ಸ್​​ನಲ್ಲಿರುವ ಫ್ರೆಂಚ್​ ಏರ್​ಬೇಸ್​ಗೆ ತೆರಳಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಟ್ವೀಟ್​​ ಮಾಡಿರುವ ಫ್ರಾನ್ಸ್​ನಲ್ಲಿರುವ ಭಾರತದ ರಾಯಭಾರ ಕಚೇರಿ 'ಶುಭ ಪ್ರಯಾಣ' ಎಂದು ಹಾರೈಸಿ ಭಾರತೀಯ ಪೈಲೆಟ್​​ಗಳೊಂದಿಗೆ ಮಾತುಕತೆ ನಡೆಸಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಇನ್ನೊಂದು ಟ್ವೀಟ್​ನಲ್ಲಿ ರಫೇಲ್​​ ಅನ್ನು ಬ್ಯೂಟಿ &​ ದ ಬೀಸ್ಟ್​ ಎಂದು ಬಣ್ಣಿಸಿದೆ.

ರಫೇಲ್​ ಫೈಟರ್ ಜೆಟ್​​ಗಳು ಹ್ಯಾಮರ್​ ಮಿಸೈಲ್​ಗಳನ್ನು ಕೂಡಾ ಹೊತ್ತು ತರಲಿವೆ. ಈ ಯುದ್ಧ ವಿಮಾನಗಳು ಅಮೆರಿಕದ ಎಫ್​-16 ಯುದ್ಧ ವಿಮಾನಗಳಿಗಿಂತ ಬಲಶಾಲಿಗಳಾಗಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಈ ಸಮಯದಲ್ಲೇ ರಫೇಲ್​​ ಯುದ್ಧ ವಿಮಾನಗಳು ವಾಯುಪಡೆಯ ಬತ್ತಳಿಕೆ ಸೇರುತ್ತಿರುವುದು ಭಾರತೀಯ ವಾಯುಪಡೆಯ ಆತ್ಮವಿಶ್ವಾಸ ಜೊತೆಗೆ ಬಲವನ್ನು ಹೆಚ್ಚಿಸಲಿದೆ.

Last Updated : Jul 27, 2020, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.