ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರ ಅಮಾನವೀಯ ಮುಖ ಮುನ್ನೆಲೆಗೆ ಬಂದಿದೆ. ದೆಹಲಿಯಲ್ಲಿ ಬಡವರಾಗಿರುವುದು ಅಪರಾಧವೆಂಬಂತೆ ವರ್ತಿಸುವ ಇಲ್ಲಿನ ಪೊಲೀಸರು, ಹಸಿವಿನಿಂದ ಬಳಲುತ್ತಿರುವವರನ್ನು ಕಂಡರೆ ಬಡಿಯುತ್ತಾರೆ, ಅಲ್ಲದೆ ಕೊಲ್ಲುವುದಕ್ಕೂ ಹಿಂದು ಮುಂದು ನೋಡುವುದಿಲ್ಲ. ಹಾಗಂತ ಭಯವಿಲ್ಲದೆ ಅವರೇ ಹೇಳಿಕೊಳ್ಳುತ್ತಾರೆ. ಈ ವಿಷಯ ಯಾಕಂದ್ರೆ ಅವರು ಈ ಮುಗ್ದ ಮಗುವಿನ ಮೇಲೆ ತೋರಿದ ಅಮಾನವೀಯ ದರ್ಪ...
ನೀವು ನೋಡುತ್ತಿರುವ ಈ ದೃಶ್ಯ ಸಂಗಮ್ ಸಿನೆಮಾ ಪ್ರದೇಶದಡಿಯಲ್ಲಿ ಬರುವ ಹಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶ. ಹೀಗೆ ಹೊಡಿಯಬೇಡಿ ಎಂದು ಅಂಗಾಲಾಚುತ್ತಿರುವ ಬಾಲಕ ಬಡವ, ಆತ ಹೊಟ್ಟೆಗೆ ಕೂಳು ಸಿಗದೆ ಹಸಿವಿನಿಂದ ಬೀದಿ ಬೀದಿ ಅಲೆಯುತ್ತಿದ್ದಾಗ, ಪೊಲೀಸ್ ದರ್ಪ ತೋರಿ ಆತನಿಗೆ ನಿರ್ದಾಕ್ಷಿಣ್ಯವಾಗಿ ಬಡಿಯುತ್ತಿದ್ದಾನೆ. ಮೊದಲೇ ಖಾಲಿ ಹೊಟ್ಟೆ, ಮೇಲೆ ಪೊಲೀಸರ ಭಯ ಅದರ ಮೇಲೆ ಹೊಡೆತ. ಆ ಮಗುವನ್ನು ಇನ್ನಷ್ಟು ಅಸಹಾಯಕತೆಗೆ ದೂಡಿತ್ತು.
ದೆಹಲಿ ಪೊಲೀಸರು ಹೃದಯ ಹೀನರು ಎನ್ನುವುದಕ್ಕೆ ಇಲ್ಲಿನ ಪೊಲೀಸ್ ಕಮಿಷನರ್ ಎಸ್.ಎನ್. ಶ್ರೀವಾಸ್ತವ ಹೇಳುವ ಮಾತು ಸಾಕು- "ದೆಹಲಿ ಪೊಲೀಸರಿಗೆ ಈಗ ಇದೊಂದು ಕೆಲಸ ಉಳಿದಿದೆ. ಹಸಿದವರಿಗೆ ಆಹಾರ ನೀಡುವುದು! ಆ ಮಗು ಅಲೆದು ಹಸಿದಿದ್ದರೆ ಅದಕ್ಕೆ ಆಹಾರ ನೀಡುವ ಕೆಲಸ ನಾವು ಮಾಡಬೇಕೇ?" ಎಂದು ತೀರಾ ಕಟುಕರಂತೆ ಈ ಘಟನೆ ಕುರಿತಾಗಿ ಮಾತನಾಡಿದ್ದಾರೆ.
ಈ ದೇಶದಲ್ಲಿ ಬಡವರಾಗಿ ಹುಟ್ಟುವುದೇ ಅಪರಾಧ ಎಂಬಂತೆ ನೋಡುವುದು ಹಾಗೂ ಇಂತಹ ಪ್ರಕರಣ ದೇಶದಲ್ಲಿ ಇದೇ ಮೊದಲೇನಲ್ಲ. ಆದರೂ ಮಾನವೀಯತೆಯನ್ನು ಸ್ವಲ್ಪ ತೋರಿ ಆ ಮಗುವಿಗೆ ಆ ರಾತ್ರಿ ಸಮಯದಲ್ಲಿ ನಡು ರಸ್ತೆಯಲ್ಲಿ ಸಾಯುವಂತೆ ಬಡಿಯದಿದ್ದರೆ, ಆ ಮಗು ಅಸಹಾಯಕತೆಯಿಂದ ಅಂಗಲಾಚಿ ಬೇಡುವಾಗ ಒಂದು ತುತ್ತು ಅನ್ನ ನೀಡಿದ್ದರೆ ಸಾಕಿತ್ತು. ಪೊಲೀಸರಿಗೂ ಹೃದಯವಿದೆ ಎಂಬುದು ಸಾಬೀತಾಗುತ್ತಿತ್ತೇನೋ.