ETV Bharat / bharat

ನೆಟ್‌ಫ್ಲಿಕ್ಸ್​ನಿಂದ ಭಾರತೀಯ ಚಂದಾದಾರರಿಗೆ ಇಂದಿನಿಂದ ಬೆಸ್ಟ್​ ಪ್ಲಾನ್​! - ಸೇಕ್ರೆಡ್ ಗೇಮ್ಸ್, ಚಾಪ್‌ಸ್ಟಿಕ್ಸ್ ಮತ್ತು ಮೈಟಿ ಲಿಟಲ್ ಭೀಮ್‌

ನೆಟ್‌ಫ್ಲಿಕ್ಸ್​ನ ಹೊಸ ಪ್ಲಾನಿಂಗ್​ ಪ್ರತಿ ತಿಂಗಳಿಗೆ 199 ರೂ. ಆಗಿದ್ದು, ಮೊಬೈಲ್​ ಮತ್ತು ಟ್ಯಾಬ್ಲೆಟ್ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿದೆ. ಇದರರ್ಥ ಬಳಕೆದಾರರು ನೆಟ್‌ಫ್ಲಿಕ್ಸ್‌ನಿಂದ ಈ ಹೊಸ ಯೋಜನೆಗೆ ಚಂದಾದಾರರಾಗಿದ್ದರೆ ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ನಲ್ಲಿ  ಮಾತ್ರ ತಮ್ಮ ನೆಚ್ಚಿನ ನೆಟ್‌ಫ್ಲಿಕ್ಸ್ ಪ್ರದರ್ಶನಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ನೆಟ್‌ಫ್ಲಿಕ್ಸ್​ನಿಂದ ಭಾರತೀಯ ಚಂದಾದಾರಿಗೆ ಇಂದಿನಿಂದ ಬೆಸ್ಟ್​ ಪ್ಲಾನ್​!!
author img

By

Published : Jul 24, 2019, 8:37 PM IST

Updated : Jul 24, 2019, 9:20 PM IST

ನವದೆಹಲಿ: ಭಾರತದ ಮನರಂಜನೆಯ ವಿಡಿಯೋ ಸ್ಟ್ರೀಮಿಂಗ್​ಗಳಾದ ಅಮೆಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್‌ಗೆ ಅಮೆರಿಕದ ಬಹುದೊಡ್ಡ ವಿಡಿಯೋ ಸ್ಟ್ರೀಮಿಂಗ್​ ನೆಟ್‌ಫ್ಲಿಕ್ಸ್ ಪ್ರತಿಸ್ಪರ್ಧಿಯಾಗಿ ನಿಂತಿದೆ. ಬುಧವಾರದಂದು ನೆಟ್‌ಫ್ಲಿಕ್ಸ್ ಭಾರತದಲ್ಲಿನ ಮೊಬೈಲ್ ಚಂದಾದಾರಿಗೆ ಕೈಗೆಟುಕುವ ಯೋಜನೆಯೊಂದನ್ನು ಪರಿಚಯಿಸಿದೆ.

ನೆಟ್‌ಫ್ಲಿಕ್ಸ್​ನ ಹೊಸ ಪ್ಲಾನಿಂಗ್​ ಪ್ರತಿ ತಿಂಗಳಿಗೆ 199 ರೂ. ಆಗಿದ್ದು, ಮೊಬೈಲ್​ ಮತ್ತು ಟ್ಯಾಬ್ಲೆಟ್ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿದೆ. ಇದರರ್ಥ ಬಳಕೆದಾರರು ನೆಟ್‌ಫ್ಲಿಕ್ಸ್‌ನಿಂದ ಈ ಹೊಸ ಯೋಜನೆಗೆ ಚಂದಾದಾರರಾಗಿದ್ದರೆ ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ನಲ್ಲಿ ಮಾತ್ರ ತಮ್ಮ ನೆಚ್ಚಿನ ನೆಟ್‌ಫ್ಲಿಕ್ಸ್ ಪ್ರದರ್ಶನಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಈಗಾಗಲೇ ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಮೂರು ಯೋಜನೆಗಳು ಚಾಲ್ತಿಯಲ್ಲಿದ್ದು, ಸ್ಟ್ಯಾಂರ್ಡಡ್​ ಮತ್ತು ಪ್ರೀಮಿಯಂ ಪ್ಲಾನ್​ಗಳು ಹೆಚ್ಚು ಬಳಕೆಯಲ್ಲಿವೆ.

ಹೊಸ ಪ್ಲಾನ್​ನನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ನೆಟ್‌ಫ್ಲಿಕ್ಸ್‌ನ ಉತ್ಪನ್ನ ನಾವೀನ್ಯತೆಯ ನಿರ್ದೇಶಕ ಅಜಯ್ ಅರೋರಾ, ವಿಶ್ವದಲ್ಲಿನ ಇತರೆ ನೆಟ್‌ಫ್ಲಿಕ್ಸ್‌ ಚಂದಾದಾರರಿಗಿಂತ ಭಾರತದ ಚಂದಾದಾರರು ತಮ್ಮ ಮೊಬೈಲ್​ನಲ್ಲಿ ಅತಿಹೆಚ್ಚು ವಿಡಿಯೋಗಳನ್ನು ವೀಕ್ಷಿಸುತ್ತಾರೆ ಮತ್ತು ಮೂವಿಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಆದ್ದರಿಂದ ಈ ಹೊಸ ಪ್ಲಾನ್​ ಮನೆಯಲ್ಲಿರುವವರಿಗೆ ಮತ್ತು ಹೊರಗೆ ಕೆಲಸ ಮಾಡುತ್ತ, ಫೊನ್​ ಮತ್ತು ಟಾಬ್ಲೆಟ್​ಗಳಲ್ಲಿ ವಿಡಿಯೋ ನೋಡುವ ಜನರಿಗೆ ಈ ಪ್ಲಾನ್​ ಇಷ್ಟವಾಗಲಿದೆ ಎಂದು ಹೇಳಿದರು.

ಎಫ್​ಐಸಿಸಿಐ-ಇವೈ 2019 ರ ವರದಿ ಪ್ರಕಾರ, ಭಾರತೀಯರು ಶೇಕಡಾ 30 ರಷ್ಟು ಸಮಯವನ್ನ ಮೊಬೈಲ್​ ಬಳಕೆ ಮಾಡುವುದರಲ್ಲಿ ಮತ್ತು ಅವರ ಮೊಬೈಲ್​ ಡೇಟಾದ ಶೇಕಡಾ70 ರಷ್ಟು ಹೆಚ್ಚಿನ ಸಮಯವನ್ನ ಮನರಂಜನೆಗಾಗಿ ಕಳೆಯುತ್ತಾರೆ ಎಂದು ಹೇಳಿದೆ.

ನೆಟ್‌ಫ್ಲಿಕ್ಸ್ ಭಾರತೀಯ ಚಲನಚಿತ್ರಗಳು ಮತ್ತು ಸರಣಿಗಳಲ್ಲಿ ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ತಲೆಮಾರುಗಳಿಗೆ ಇಷ್ಟವಾಗುವಂತಹ ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡುತ್ತದೆ. ಅದರಲ್ಲಿ ಸೇಕ್ರೆಡ್ ಗೇಮ್ಸ್, ಚಾಪ್‌ಸ್ಟಿಕ್ಸ್ ಮತ್ತು ಮೈಟಿ ಲಿಟಲ್ ಭೀಮ್‌ನಂತಹ ಸರಣಿಗಳು ಹೆಚ್ಚು ಫೇಮಸ್​ ಆಗಿವೆ. ಹಾಗೂ ಕಂಪನಿಯ ಪ್ರಕಾರ, ಹೊಸ ಹದಿಮೂರು ಚಿತ್ರಗಳು ಮತ್ತು ಒಂಬತ್ತು ಹೊಸ ಮೂಲ ಸರಣಿಗಳು ಈಗಾಗಲೇ ಸಿದ್ಧವಾಗಿವೆ.

ಈ ಕಡಿಮೆ ವೆಚ್ಚದ ಪ್ಲಾನ್​ಗಳು ಇತರೆ ದೇಶಗಳಲ್ಲಿ ಪರಿಚಯಿಸಲಾಗುತ್ತದೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾದಾಗ್ಯೂ, ಭಾರತದಲ್ಲಿನ ಗ್ರಾಹಕರು ಮಾತ್ರ ಇಂದಿನಿಂದ ಪ್ರಾರಂಭವಾಗುವ 199 ರೂ ಮೊಬೈಲ್ ಮತ್ತು ಟಾಬ್ಲೆಟ್​ ಯೋಜನೆಯನ್ನು ಆರಿಸಿಕೊಳ್ಳಬಹುದು.

Intro:Body:Conclusion:
Last Updated : Jul 24, 2019, 9:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.