ನವದೆಹಲಿ: ನೀಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಅಕ್ಟೋಬರ್ 20ರಂದು ಅಧಿಸೂಚನೆ ಹೊರಡಿಸಿದ್ದು, ''ಭಾರತೀಯ'' ಅಥವಾ ''ಇತರ'' ಕೆಟಗರಿಯಲ್ಲಿ ಪರೀಕ್ಷೆ ಬರೆದಿರುವ ಅನಿವಾಸಿ ಭಾರತೀಯ ಅಭ್ಯರ್ಥಿಗಳು ತಮ್ಮ ಕೆಟಗರಿ ಬದಲಾಯಿಸಿಕೊಳ್ಳುವ ಮತ್ತು ಎನ್ಆರ್ಐ ಕೋಟಾದಡಿ ಕೌನ್ಸೆಲಿಂಗ್ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ.
ಪದವಿ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಯಲಿದ್ದು, ಇಲ್ಲಿ ಅಖಿಲ ಭಾರತ ಕೋಟಾ ಸ್ಥಾನಗಳನ್ನು ಶೇ 15ಕ್ಕೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಅವಶ್ಯಕತೆ ಇದ್ದವರು ''ಭಾರತೀಯ'' ಕೆಟಗರಿಯಿಂದ ಅನಿವಾಸಿ ಭಾರತೀಯ ಕೋಟಾಗೆ ತಮ್ಮ ಕೆಟಗರಿ ಬದಲಾಯಿಸಿಕೊಳ್ಳಲು ಅವಕಾಶವಿದೆ.
![notification](https://etvbharatimages.akamaized.net/etvbharat/prod-images/9270886_cxz.png)
ಕೆಟಗರಿ ಬದಲಾವಣೆ ಮಾಡಿಕೊಳ್ಳುವ ಅಭ್ಯರ್ಥಿಗಳು nri.adgmemcc1@gmail.com ಇ-ಮೇಲ್ಗೆ ತಮ್ಮ ದಾಖಲೆಗಳನ್ನು ಅಕ್ಟೋಬರ್ 23ರೊಳಗೆ ಕಳುಹಿಸಬೇಕೆಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು (https://mcc.nic.in) ಅಧಿಕೃತ ವೆಬ್ಸೈಟ್ಗೆ ತೆರಳಿ ಮಾಹಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ಅಧಿಸೂಚನೆ ಪಡೆಯಬಹುದಾದ ನೇರ ಲಿಂಕ್ ಇಲ್ಲಿದೆ.