ETV Bharat / bharat

ಬಿಹಾರದ ಒಟ್ಟು ಸೋಂಕಿತರ ಪೈಕಿ ಶೇ.33ರಷ್ಟು ಮಂದಿ ಒಂದೇ ಕುಟುಂಬದವರು!

ಬಿಹಾರದ ಒಂದೇ ಕುಟುಂಬದ 20 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ.

Bihar COVID-19
Bihar COVID-19
author img

By

Published : Apr 10, 2020, 12:37 PM IST

ಸಿವಾನ್​(ಬಿಹಾರ): ದೇಶದಲ್ಲಿ ಇಲ್ಲಿಯವರೆಗೆ 6 ಸಾವಿರಕ್ಕೂ ಹೆಚ್ಚು ಜನರನ್ನು ಕೊರೊನಾ ಸೋಂಕು ನರಳುವಂತೆ ಮಾಡಿದೆ. ಪೂರ್ವಭಾಗದಲ್ಲಿರುವ ಬಿಹಾರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 60ರ ಗಡಿ ದಾಟಿದೆ. ವಿಶೇಷ ಅಂದರೆ, ಒಂದೇ ಕುಟುಂಬದ 20ಕ್ಕೂ ಹೆಚ್ಚು ಜನರಿಲ್ಲಿ ಮಾರಕ ಸೋಂಕಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸಿವಾನ್​ದಲ್ಲಿ ವಾಸವಾಗಿರುವ ಈ ಕುಟುಂಬದ ಎಲ್ಲರಿಗೂ ಮಾರಕ ವೈರಾಣು ಬಾಧಿಸಿದೆ. ಕಳೆದ ತಿಂಗಳು ಓಮನ್​ನಿಂದ ವಾಪಸ್​ ಆಗಿದ್ದ ವ್ಯಕ್ತಿಯಿಂದ ಈ ಸೋಂಕು ಹರಡಿದೆ ಎಂಬ ಮಾಹಿತಿ ಇದೆ.

ಇದರ ಹೊರತಾಗಿ ಪಾಟ್ನಾ 5, ಮಂಗೂರ್​​ 7, ನಲಂದಾ 2, ಗಯಾ 5 ಹಾಗು ಗೋಪಾಲ್​ಗಂಜ್‌ನಲ್ಲಿ​ 3 ಪಾಸಿಟಿವ್‌ ಕೇಸ್​ ಕಾಣಿಸಿಕೊಂಡಿದೆ.

ಹೊರದೇಶದಿಂದ ಬಂದವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತಪಾಸಣೆ, ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಸಿಎಂ ನಿತೀಶ್ ಕುಮಾರ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.