ಮುಂಬೈ: ಮುಂಬೈ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಖಾಸಗಿ ಸುದ್ದಿ ವಾಹಿನಿ ಸ್ಥಾಪಕರಾದ ರಾಧಿಕಾ ಮತ್ತು ಪ್ರಣಯ್ ರಾಯ್ ಅವರನ್ನು ನಿಲ್ದಾಣದಲ್ಲೇ ತಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಣಯ್ ರಾಯ್, ನಮ್ಮ ಮೂಲಭೂತ ಹಕ್ಕನ್ನು ಸರ್ಕಾರ ಕಸಿದುಕೊಂಡಿದೆ ಅಸಮಾಧಾನ ತೋಡಿಕೊಂಡಿದ್ದಾರೆ.
ಐಸಿಐಸಿಐ ಸಾಲದ ಬಗ್ಗೆ ಸಿಬಿಐ ಸಲ್ಲಿಸಿರುವ ನಕಲಿ ಮತ್ತು ಸಂಪೂರ್ಣ ಆಧಾರರಹಿತ ಭ್ರಷ್ಟಾಚಾರದ ಪ್ರಕರಣ ಸಂಬಂಧ ವಿದೇಶ ಪ್ರಯಾಣ ತಡೆ ಹಿಡಿಯಲಾಗಿದೆ ಎಂದು ಎನ್‌ಡಿಟಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಣಯ್ ರಾಯ್ ಅವರ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಐಸಿಐಸಿ ಬ್ಯಾಂಕ್‌ನಿಂದ ವಾರ್ಷಿಕ 19% ಬಡ್ಡಿದರದಲ್ಲಿ 375 ಕೋಟಿ ರೂ ಸಾಲ ಪಡೆದಿತ್ತು. ಆದರೆ 9.5% ರಷ್ಟು ಬಡ್ಡಿ ದರವನ್ನು ನೀಡಲಾಗಿದ್ದು ಐಸಿಐಸಿಐ ಬ್ಯಾಂಕ್‌ಗೆ ₹ 48 ಕೋಟಿ ರೂ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸಿಬಿಐ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದೆ. ಹೀಗಾಗಿ ವಿದೇಶಕ್ಕೆ ಪ್ರಯಾಣಕ್ಕೆ ಸಿದ್ದರಾಗಿದ್ದ ರಾಧಿಕಾ ಮತ್ತು ಪ್ರಣಯ್ ರಾಯ್ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ ಎಂಬ ಮಾಹಿತಿ ದೊರಕಿದೆ.