ETV Bharat / bharat

ಆರ್​ಎಸ್​ಎಸ್​ನಿಂದ ಪ್ರಚಾರದ ಕಲೆ ಕಲಿಯಿರಿ: ಕಾರ್ಯಕರ್ತರಿಗೆ ಪವಾರ್​ ಅಡ್ವೈಸ್​!

author img

By

Published : Jun 7, 2019, 12:18 PM IST

ಜನರೊಂದಿಗೆ ಸಂಪರ್ಕ ಸಾಧಿಸಿ, ಮುಂದುವರೆಸುವುದು ಹೇಗೆಂದು ಆರ್​ಎಸ್​ಎಸ್​ನವರಿಗೆ ಗೊತ್ತು. ಆರ್​ಎಸ್​ಎಸ್​ ಕಾರ್ಯಕರ್ತರಂತೆ ನೀವೂ ಕೆಲಸ ಮಾಡಿ ಎಂದು ಎನ್​ಸಿಪಿ ನಾಯಕ ಶರದ್​ ಪವಾರ್​ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

Sharad Pawar

ಮುಂಬೈ: ಎನ್​ಸಿಪಿ ನಾಯಕ ಶರದ್​ ಪವಾರ್​ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಮೋಘ ಜಯ ಸಾಧಿಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

ಬಿಜೆಪಿ ಸೈದ್ಧಾಂತಿಕ ಮಾರ್ಗದರ್ಶಿ ಆರ್​ಎಸ್​ಎಸ್​ ಕಾರ್ಯಕರ್ತರಂತೆ ನೀವೂ ಕೆಲಸ ಮಾಡಿ ಎಂದು ಪವಾರ್​ ಹೇಳಿದ್ದಾರೆ. ನೀವು ಆರ್​ಎಸ್​ಎಸ್​ ಕಾರ್ಯಕರ್ತರು ಹೇಗೆ ಪ್ರಚಾರ ಮಾಡ್ತಾರೆ ಅಂತ ಗಮನಿಸಬೇಕು. ಅವರು ಐದು ಮನೆಗಳಿಗೆ ಭೇಟಿ ನೀಡಿದಾಗ, ಒಂದು ಮನೆಗೆ ಬೀಗ ಹಾಕಿದ್ದರೂ, ಆ ಮನೆಗೆ ತಮ್ಮ ಸಂದೇಶ ರವಾನಿಸುವವರೆಗೆ ಕಾಯುತ್ತಾರೆ. ಜನರೊಂದಿಗೆ ಸಂಪರ್ಕ ಸಾಧಿಸಿ, ಮುಂದುವರೆಯುವುದು ಹೇಗೆಂದು ಆರ್​ಎಸ್​ಎಸ್​ನವರಿಗೆ ಗೊತ್ತು ಎಂದು ಬಣ್ಣಿಸಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಹಿನ್ನೆಲೆ ಕಾರ್ಯಕರ್ತರು ಇಂದಿನಿಂದಲೇ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ. ಆಗ ಚುನಾವಣೆ ಸಮೀಪದಲ್ಲಿ ನಮ್ಮ ಬಳಿ ಏಕೆ ಬರ್ತೀರಾ? ಎಂದು ಜನರು ಕೇಳುವುದು ತಪ್ಪುತ್ತೆ ಎಂದು ಸಲಹೆ ನೀಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆ ಗುರುತಿಸಿಕೊಂಡಿದ್ದ ಎನ್​ಸಿಪಿ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ.

Intro:Body:

Sharad Pawar

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.