ETV Bharat / bharat

ಸಿಎಂ ಮೇಲೆ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು - undefined

ಕಳೆದ ತಿಂಗಳು ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದ ಸಿಧು, ಟ್ವಿಟರ್​ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ, ನನಗೆ ನೀಡಲಾದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದಾರೆ.

Navjot Sidhu
author img

By

Published : Jul 14, 2019, 1:30 PM IST

ಚಂಡೀಗಢ: ಸಿಎಂ ಜತೆ ಜಟಾಪಟಿ ನಡೆಸಿ ಪ್ರಮುಖ ಖಾತೆ ಕಳೆದುಕೊಂಡಿದ್ದ ನವಜೋತ್​ ಸಿಂಗ್ ಸಿಧು, ಇದೀಗ ತಮಗೆ ಸೂಚಿಸಲಾಗಿದ್ದ ಸಚಿವ ಸ್ಥಾನವನ್ನು ಅಲಂಕರಿಸುವ ಮುನ್ನವೇ ರಾಜೀನಾಮೆ ನೀಡಿದ್ದನ್ನು ಬಹಿರಂಗಪಡಿಸಿದ್ದಾರೆ.

ಕಳೆದ ತಿಂಗಳು ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದ ಸಿಧು, ಟ್ವಿಟರ್​ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ, ನನಗೆ ನೀಡಲಾದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, ಈ ಪತ್ರವನ್ನು ಸಿಎಂಗೆ ಸಹ ಕಳುಹಿಸುವುದಾಗಿ ಬರೆದುಕೊಂಡಿದ್ದಾರೆ.

ಕಳೆದ ತಿಂಗಳು ರಾಹುಲ್ ಅವರನ್ನು ಭೇಟಿ ಮಾಡಿದ್ದ ವೇಳೆ ಟ್ವೀಟ್​ ಮಾಡಿದ್ದ ಸಿಧು, ಅಧ್ಯಕ್ಷರನ್ನು ಭೇಟಿ ಮಾಡಿದ್ದೆನು. ಅವರಿಗೆ ಪತ್ರ ನೀಡಿ, ಪರಿಸ್ಥಿತಿ ಏನೆಂದು ವಿವರಿಸಿದ್ದೇನೆ ಎಂದಷ್ಟೇ ಬರೆದುಕೊಂಡಿದ್ದರು.

  • Will be sending my resignation to the Chief Minister, Punjab.

    — Navjot Singh Sidhu (@sherryontopp) July 14, 2019 " class="align-text-top noRightClick twitterSection" data=" ">

ಲೋಕಸಭೆ ಚುನಾವಣೆ ವೇಳೆ ಪಂಜಾಬ್ ಸಿಎಂ ಅಮರಿಂದರ್​ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ವೈಮನಸ್ಸು ಮೂಡಿತ್ತು. ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದ ಸಿಧುಗೆ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಬದಲು ಇಂಧನ ಹಾಗೂ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಖಾತೆ ನೀಡಲಾಗಿತ್ತು. ಅಂದಿನಿಂದಲೂ ಸಿಧು ಈ ಬಗ್ಗೆ ಅಸಮಾಧಾನ ಹೊಂದಿದ್ದರು. ಪರಿಣಾಮ ಸಚಿವ ಸಂಪುಟದಿಂದಲೇ ಅವರು ಹೊರಬರಲು ನಿರ್ಧರಿಸಿದ್ದಾರೆ.

Intro:Body:

Navjot Sidhu

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.