ಭುವನೇಶ್ವರ್ : ಒಡಿಶಾದಲ್ಲಿ ಫಣಿ ಚಂಡಮಾರುತದಿಂದ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೆ ಫಣಿ ಯಮಪಾಶಕ್ಕೆ 34 ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ಫಣಿ ಸಂತ್ರಸ್ತರಿಗೆ ಒಡಿಶಾ ಸಿಎಂ 1 ವರ್ಷದ ಸಂಬಳ : ₹19.20 ಕೋಟಿ ಪರಿಹಾರ ನಿಧಿಗೆ ಕೊಟ್ಟ ಪಟ್ನಾಯಕ್ - kannada news
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ಭುವನೇಶ್ವರ್ : ಒಡಿಶಾದಲ್ಲಿ ಫಣಿ ಚಂಡಮಾರುತದಿಂದ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೆ ಫಣಿ ಯಮಪಾಶಕ್ಕೆ 34 ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರಿಗೆ ಸಿಎಂ ಸಹಾಯಹಸ್ತ
Intro:ಬೆಂಗಳೂರು : ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್‍ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ.Body:ಪ್ರವಾಸದಲ್ಲಿದ್ದ ಮೂಡಿಗೆರೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶಶಿಕಲಾ ಅವರು ತಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ಇಂದು ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತಂದಿದ್ದರು.
ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಕೂಡಲೇ ಪರಿಸ್ಥಿತಿಯನ್ನು ನಿಭಾಯಿಸಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿರುವ ನಿವಾಸಿ ಆಯುಕ್ತರಿಗೆ ಸೂಚಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ದೆಹಲಿಯ ನಿವಾಸಿ ಆಯುಕ್ತರು ಸಮಸ್ಯೆಯನ್ನು ಬಗೆಹರಿಸಿದ್ದು, ನಾಳೆ ಬೆಳಗಿನ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಲು ವ್ಯವಸ್ಥೆ ಕಲ್ಪಿಸಿದ್ದಾರೆ.
Conclusion:
Conclusion: