ETV Bharat / bharat

ಇಂದು 'ರಾಷ್ಟ್ರೀಯ ಕ್ರೀಡಾ ದಿನ': ಹಾಕಿ ದಂತಕಥೆ ಧ್ಯಾನ್ ಚಂದ್ ಸಿಂಗ್​ ಚಿರ ನೆನಪು

author img

By

Published : Aug 29, 2020, 6:01 AM IST

Updated : Aug 29, 2020, 6:42 AM IST

ಇಂದು ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಇಂದು ವಿಶ್ವದಾದ್ಯಂತ ಕ್ರೀಡೆಯ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದ ಪಟುಗಳಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

national-sports-day-29th-august
ಹಾಕಿ ದಂತಕಥೆ ಧ್ಯಾನ್ ಚಂದ್ ಸಿಂಗ್​ ಚಿರ ನೆನಪು

ಹೈದರಾಬಾದ್: ಪ್ರತಿ ವರ್ಷ ಆಗಸ್ಟ್ 29ರಂದು ಭಾರತವು 'ರಾಷ್ಟ್ರೀಯ ಕ್ರೀಡಾ ದಿನ'ವನ್ನು ಆಚರಿಸುತ್ತದೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರ ಮೇಜರ್ ಧ್ಯಾನ್​ ಚಂದ್ ಸಿಂಗ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆ ಮತ್ತು ದೈನಂದಿನ ಚಟುವಟಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.

ಹಾಕಿ ದಂತಕಥೆ ಮೇಜರ್ ಧ್ಯಾನ್ ​​ಚಂದ್ ಅವರು ದೇಶದ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಮಾಂತ್ರಿಕ ಸ್ಪರ್ಶ, ಭವ್ಯವಾದ ನಿಯಂತ್ರಣ, ಸೃಜನಶೀಲತೆ ಮತ್ತು ಅಸಾಧಾರಣ ಗೋಲ್-ಸ್ಕೋರಿಂಗ್ ಸಾಹಸಗಳಿಂದ ‘ದಿ ವಿಝಾರ್ಡ್’ ಎಂದೇ ಕರೆಯಲ್ಪಟ್ಟಿದ್ದರು. ಚಂದ್, ತಮ್ಮ ನಾಯಕತ್ವದಲ್ಲಿ ಭಾರತೀಯ ಹಾಕಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಷ್ಟ್ರೀಯ ಕ್ರೀಡಾ ದಿನದ ಆಚರಣೆ:

ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಇದನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತದೆ. ಇಂದು ವಿಶ್ವದಾದ್ಯಂತ ಕ್ರೀಡೆಯ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದ ಪಟುಗಳಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ದಿನ ಭಾರತದ ರಾಷ್ಟ್ರಪತಿಗಳು ಖೇಲ್ ರತ್ನ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ಕ್ರೀಡಾ ಸಾಧಕರಿಗೆ ನೀಡಿ ಗೌರವಿಸುತ್ತಾರೆ.

ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ:

ಕ್ರೀಡೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ಹೊರತಾಗಿ, ಈ ವಿಶೇಷ ದಿನವು ಭಾರತದ ಶ್ರೀಮಂತ ಕ್ರೀಡಾ ಇತಿಹಾಸ ಮತ್ತು ಸಂಸ್ಕೃತಿಗೆ ಚಂದ್ ಅವರ ಸಾಧನೆ ಮತ್ತು ಕೊಡುಗೆಗಳನ್ನು ಬಿಂಬಿಸುತ್ತದೆ. ಧ್ಯಾನ್ ಚಂದ್ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿಕೊಂಡರು ಮತ್ತು ಅವರ ತರಬೇತುದಾರ ಪಂಕಜ್ ಗುಪ್ತಾ ಅವರಿಂದ ಹಾಕಿ ಕಲಿತರು. ಬಾಲ್ ಡ್ರಿಬ್ಲಿಂಗ್ ತಂತ್ರದಲ್ಲಿ ಅವರು ಬಹುಬೇಗ ಪರಿಣಿತಿ ಹೊಂದಿದ್ದರು. ಬಳಿಕ ಅವರು ಭಾರತೀಯ ಹಾಕಿ ತಂಡದ ನಾಯಕರಾದರು. ಅಸಾಧಾರಣ ಕೌಶಲ್ಯದಿಂದಾಗಿ 'ಚಂದ್' ಎಂದೇ ಹೆಸರಿಸಲ್ಪಟ್ಟರು.

ಮಹಾನ್​ ಆಟಗಾರನಿಗೆ ನಿಜವಾದ ಗೌರವವನ್ನು ನೀಡಲು ಅವರ ಜನ್ಮದಿನವನ್ನು 2012ರಿಂದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತು. ಪದ್ಮಭೂಷಣ ಪ್ರಶಸ್ತಿ ಪಡೆದ ಏಕೈಕ ಹಾಕಿ ಆಟಗಾರ ಧ್ಯಾನ್ ಚಂದ್. ಅವರ ಜೀವಮಾನದ ಪ್ರಶಸ್ತಿಗಳು ಮತ್ತು ಕ್ರೀಡೆಗಳಲ್ಲಿನ ಸಾಧನೆಗಳು ಭಾರತೀಯ ಕ್ರೀಡಾ ಇತಿಹಾಸದ ಅತ್ಯುನ್ನತ ಸ್ಥಾನವೆಂದು ಪರಿಗಣಿಸಲಾಗಿದೆ. ಇಂತಹ ಪ್ರಸಿದ್ಧ ಆಟಗಾರನಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ.

ಕ್ರೀಡಾ ಚಟುವಟಿಕೆ ಮೇಲೆ ಕೊರೊನಾ ಕರಿನೆರಳು:

ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ವಿಳಂಬವಾಗಿದೆ. ಸಚಿವಾಲಯವು ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದರೆ, ಅವುಗಳನ್ನು ಪ್ರದಾನ ಮಾಡುವ ಸಮಾರಂಭವು ಆಗಸ್ಟ್ 29ರಂದು ನಡೆಯುತ್ತದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

ಭಾರತೀಯ ಕ್ರೀಡಾ ಸಚಿವಾಲಯವು ಆಗಸ್ಟ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿತು. ನಿವೃತ್ತ ನ್ಯಾ. ಮುಕುಂದಕಂ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಅರ್ಜುನ ಪ್ರಶಸ್ತಿಗೆ 29 ಹೆಸರುಗಳನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ರಾಷ್ಟ್ರಪತಿ ಭವನದ ಬದಲು ವರ್ಚುವಲ್​ ಸಮಾರಂಭದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.

Last Updated : Aug 29, 2020, 6:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.