ETV Bharat / bharat

ಇಂದು ರಾಷ್ಟ್ರೀಯ ಹೃದಯ ಕಸಿ ದಿನ: ಹಾರ್ಟ್​ ಟ್ರಾನ್ಸ್​ಪ್ಲಾಂಟ್​ ಬಗ್ಗೆ ಒಂದಿಷ್ಟು ಮಾಹಿತಿ - ಹೃದಯ ಕಸಿ

2003 ರಲ್ಲಿ ದೇಶದಲ್ಲಿ ನಡೆಸಿದ ಮೊದಲ ಹೃದಯ ಕಸಿ ಕಾರ್ಯಾಚರಣೆಯನ್ನು ಆಚರಿಸಲು, ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಆಗಸ್ಟ್ 3 ಅನ್ನು ರಾಷ್ಟ್ರೀಯ ಹೃದಯ ಕಸಿ ದಿನವನ್ನಾಗಿ ಘೋಷಣೆ ಮಾಡಿದ್ದರು.

ಇಂದು ರಾಷ್ಟ್ರೀಯ ಹೃದಯ ಕಸಿ ದಿನ
ಇಂದು ರಾಷ್ಟ್ರೀಯ ಹೃದಯ ಕಸಿ ದಿನ
author img

By

Published : Aug 3, 2020, 7:43 PM IST

ನಾರ್ಮನ್ ಶಮ್‌ವೇ ಅವರನ್ನು ಹೃದಯ ಕಸಿ ಮಾಡುವಿಕೆಯ ಪಿತಾಮಹ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದರೂ, ವಿಶ್ವದ ಮೊದಲ ವಯಸ್ಕ ಮಾನವ ಹೃದಯ ಕಸಿಯನ್ನು ಕ್ರಿಸ್ಟಿಯನ್ ಬರ್ನಾರ್ಡ್ ಅವರು ಡಿಸೆಂಬರ್ 3, 1967 ರಂದು ದಕ್ಷಿಣ ಆಫ್ರಿಕದ ಕೇಪ್ ಟೌನ್‌ನ ಗ್ರೂಟ್ ಶುಯರ್ ಆಸ್ಪತ್ರೆಯಲ್ಲಿ ನಡೆಸಿದರು. ಆಡ್ರಿಯನ್ ಕಾಂಟ್ರೊವಿಟ್ಜ್ ಅವರು ಡಿಸೆಂಬರ್ 6, 1967 ರಂದು ವಿಶ್ವದ ಮೊದಲ ಮಕ್ಕಳ ಹೃದಯ ಕಸಿಯನ್ನು ಮಾಡಿದರು ಮತ್ತು ನಾರ್ಮನ್ ಶಮ್​ವೇ ಯುನೈಟೆಡ್ ಸ್ಟೇಟ್ಸ್​ ನಲ್ಲಿ ಜನವರಿ 6, 1968 ರಂದು ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಮೊದಲ ವಯಸ್ಕ ಹೃದಯ ಕಸಿಯನ್ನು ಮಾಡಿದರು.

ಅಮೆರಿಕದ ಶಸ್ತ್ರಚಿಕಿತ್ಸಕ ನಾರ್ಮನ್ ಶಮ್‌ವೇ 1958 ರಲ್ಲಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಾಯಿಯೊಂದಕ್ಕೆ ಮೊದಲ ಯಶಸ್ವಿ ಹೃದಯ ಕಸಿಯನ್ನು ಯಶಸ್ವಿಯಾಗಿ ಮಾಡಿದರು.

ಭಾರತದಲ್ಲಿ, ಕ್ರಿಸ್ಟಿಯನ್ ಬರ್ನಾರ್ಡ್ ನಂತರ ಪಿ ಕೆ ಸೇನ್ ಮಾನವರಲ್ಲಿ ಮೊದಲ ಹೃದಯ ಕಸಿಗೆ ಪ್ರಯತ್ನಿಸಿದರು. ಆದರೆ ನಂತರದಲ್ಲಿ ರೋಗಿಗಳು ಸಾವನ್ನಪ್ಪಿದರು. ಭಾರತದಲ್ಲಿ ಡಾ. ಪಿ. ವೇಣುಗೋಪಾಲ್ ಮೊದಲ ಯಶಸ್ವಿ ಹೃದಯ ಕಸಿಯನ್ನು 1994 ರಲ್ಲಿ ನವದೆಹಲಿಯ ಏಮ್ಸ್​ನಲ್ಲಿ ನಡೆಸಿದರು.

2003 ರಲ್ಲಿ ದೇಶದಲ್ಲಿ ನಡೆಸಿದ ಮೊದಲ ಹೃದಯ ಕಸಿ ಕಾರ್ಯಾಚರಣೆಯನ್ನು ಆಚರಿಸಲು, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಗಸ್ಟ್ 3 ಅನ್ನು ರಾಷ್ಟ್ರೀಯ ಹೃದಯ ಕಸಿ ದಿನವನ್ನಾಗಿ ಘೋಷಣೆ ಮಾಡಿದರು.

ಆ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಸುಷ್ಮಾ ಸ್ವರಾಜ್ ಹೇಳಿರುವಂತೆ, ಯುಎಸ್ ಮತ್ತು ಯುಕೆ ನಂತರ ಭಾರತವು ವಿಶ್ವದ ಮೂರನೇ ಯಶಸ್ವಿ ಹೃದಯ ಕಸಿ ಮಾಡಿದ ದೇಶವಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.

ಭಾರತದಲ್ಲಿ ಕಾನೂನು ಚೌಕಟ್ಟು: ಮಾನವ ಅಂಗಗಳ ಕಸಿ ಮಸೂದೆಯು 1994 ರ ಜುಲೈ 7 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಚಿಕಿತ್ಸಕ ಉದ್ದೇಶಗಳಿಗಾಗಿ ಮತ್ತು ಮಾನವನ ಅಂಗಗಳ ತೆಗೆಯುವಿಕೆ, ಸಂಗ್ರಹಣೆ ಮತ್ತು ಕಸಿ ಮಾಡುವ ವ್ಯವಸ್ಥೆಯನ್ನು ಚಿಕಿತ್ಸಕ ಉದ್ದೇಶಗಳಿಗಾಗಿ ಮತ್ತು ಮಾನವನಲ್ಲಿನ ವಾಣಿಜ್ಯ ವ್ಯವಹಾರಗಳನ್ನು ತಡೆಗಟ್ಟುವಿಕೆಗಾಗಿ ಮಾನವ ಅಂಗಗಳ ಕಸಿ ಕಾಯ್ದೆ (THOA) 1994 ಅನ್ನು ಜಾರಿಗೆ ತರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.