ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇಂಡಿಯಾ ಗೇಟ್ ಬಳಿಕ ಪ್ರವಾಹವೋಪಾದಿಯಲ್ಲಿ ಮಳೆ ನೀರು ಹರಿಯುತ್ತಿದೆ.
ಈ ದೃಶ್ಯಗಳು ಈಗ ಕ್ಯಾಮರಾದಲ್ಲಿ ಸೆರೆಯಾಗಿವೆ. ಇನ್ನು ಮ್ಯಾಕ್ಸ್ ಮುಲ್ಲರ್ ಮಾರ್ಗ್ದಲ್ಲೂ ಮಳೆ ತನ್ನ ಆರ್ಭಟ ತೋರಿಸಿದೆ. ತಿಂಗಳ ಆರಂಭದಲ್ಲಿ ಬಿಸಿಲಿನಿಂದ ಬಸವಳಿದಿದ್ದ ದೆಹಲಿ ಮಳೆಯಿಂದಾಗಿ ತಂಪಾಗಿದೆ.
ಕೊರೊನಾ ಮಹಾಮಾರಿ ನಡುವೆ ಇಲ್ಲಿನ ಜನ ಇನ್ಮುಂದೆ ಮಳೆಗಾಲವನ್ನೂ ಎದುರಿಸಬೇಕಿದೆ.