ನವದೆಹಲಿ: ಫೆಬ್ರವರಿ 24ರಂದು ಗುಜರಾತ್ನ ಅಹಮದಾಬಾದ್ ನಗರದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಇಂದು ಇಡೀ ದೇಶ ಬೆಲೆ ತೆರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಹಮದಾಬಾದ್‌ನಲ್ಲಿ ಫೆಬ್ರವರಿ 24ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದಾಗಿ ಗುಜರಾತ್ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ನಿನ್ನೆ ಆರೋಪಿಸಿದ್ದರು. ಈಗ ಇದಕ್ಕೆ ಕಾಂಗ್ರೆಸ್ ಧ್ವನಿಗೂಡಿಸಿದ್ದು, ನಮಸ್ತೆ ಟ್ರಂಪ್ ಪ್ರಚಾರ ಕಾರ್ಯಕ್ರಮದಿಂದಾಗಿ ಅಹಮದಾಬಾದ್ ರಾಜ್ಯದ ಕೊರೊನಾ ಹಾಟ್ಸ್ಪಾಟ್ ಆಗಿದೆ. ರಾಜ್ಯದ ಶೇ.73 ರಷ್ಟು ಸಾವು ಅಹಮದಾಬಾದ್‌ನಲ್ಲಿ ಸಂಭವಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
-
How many cases in Ahmedabad have been linked to the Namaste Trump event? Has the BJP Govt, either Central or State, thought of investigating this aspect or are they too busy evading the PM's responsibility? #BJPFailsGujarat pic.twitter.com/xHn0eug6CT
— Congress (@INCIndia) May 7, 2020 " class="align-text-top noRightClick twitterSection" data="
">How many cases in Ahmedabad have been linked to the Namaste Trump event? Has the BJP Govt, either Central or State, thought of investigating this aspect or are they too busy evading the PM's responsibility? #BJPFailsGujarat pic.twitter.com/xHn0eug6CT
— Congress (@INCIndia) May 7, 2020How many cases in Ahmedabad have been linked to the Namaste Trump event? Has the BJP Govt, either Central or State, thought of investigating this aspect or are they too busy evading the PM's responsibility? #BJPFailsGujarat pic.twitter.com/xHn0eug6CT
— Congress (@INCIndia) May 7, 2020
ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದಾಗಿ ಗುಜರಾತ್ ಮಾತ್ರವಲ್ಲ, ಇಡೀ ರಾಷ್ಟ್ರವೇ ಇಂದು ತಕ್ಕ ಬೆಲೆ ತೆರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜಿಸಿದ್ದ ಅಹಮದಾಬಾದ್, ಕೊರೊನಾ ವ್ಯಾಪಿಸಿದ ಅತ್ಯಂತ ಕೆಟ್ಟ ನಗರಗಳಲ್ಲಿ ಒಂದು ಎಂಬುದು ಕಾಕತಾಳೀಯವೇ? ಎಂದು ಪಕ್ಷ ಪ್ರಶ್ನಿಸಿದೆ.
ಗುಜರಾತ್ ಮಾದರಿಯ ಅಭಿವೃದ್ಧಿ ಎಂಬುದು ಶೂದ್ಧ ಸುಳ್ಳಾಗಿದ್ದು, ಇದು ಗುಜರಾತ್ ರಾಜ್ಯವನ್ನು ಮಾತ್ರವಲ್ಲದೆ, ಇಡೀ ರಾಷ್ಟ್ರವನ್ನೇ ಸಂಪೂರ್ಣ ಧ್ವಂಸ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.