ನವದೆಹಲಿ: ದೇಶದ 20 ರಾಜ್ಯಗಳಲ್ಲಿ ಇಂದು ಲೋಕಸಭೆಯ ಮೊದಲ ಹಂತದ ವೋಟಿಂಗ್ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳ ಮೇಲೂ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಸೂಕ್ಷ್ಮವಾಗಿ ಗಮನಿಸುತ್ತಿದೆ.
ಇದರ ಮಧ್ಯೆ ಉತ್ತರಪ್ರದೇಶದ ಗೌತಮಬುದ್ದ ನಗರ ಕ್ಷೇತ್ರದ ನೋಯ್ಡಾ ಸೆಕ್ಟರ್ 15ಎ ಮತಕ್ಷೇತ್ರದ ಬಳಿ ಪೊಲೀಸ್ ಪೇದೆಗಳು ವಾಹನದಲ್ಲಿ ನಮೋ ಪುಡ್ ಪ್ಯಾಕೇಟ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಶರ್ಮಾ ಮತದಾನ ಮಾಡಲು ಬರುವುದಕ್ಕೂ ಮುಂಚಿತವಾಗಿ ಈ ಫುಡ್ ಪ್ಯಾಕೇಟ್ ಕಂಡು ಬಂದಿವೆ. ಇನ್ನು ಪೊಲೀಸರೇ ತಮ್ಮ ವಾಹನಗಳಿಂದ ಮತಗಟ್ಟೆ ಬಳಿ ನಮೋ ಪುಡ್ ಪ್ಯಾಕೇಟ್ ಕೆಳಗಿಳಿಸುತ್ತಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಊಟಕ್ಕಾಗಿ ಆರ್ಡರ್ ಮಾಡಲಾಗಿತ್ತು. ಅವು ಈ ರೀತಿಯಾಗಿ ಬಂದಿವೆ ಎಂದು ತಿಳಿಸಿದ್ದಾರೆ.ಈ ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕೆಲಹೊತ್ತು ಗಲಾಟೆ ಕೂಡ ನಡೆದಿದೆ.