ಚೆನ್ನೈ: ಕೊರೊನಾ ವೈರಸ್ ಜಾಗತಿಕ ಮಾರುಕಟ್ಟೆಯನ್ನೇ ಅಲ್ಲಾಡಿಸುತ್ತಿದೆ. ಅತ್ತ ಚಿನ್ನದ ಬೆಲೆ ಕುಸಿಯುತ್ತಿದ್ದರೆ, ಇತ್ತ ಕೋಳಿ ಮಾಂಸ ಹಾಗೂ ಮೊಟ್ಟೆಯ ಬೆಲೆಯೂ ಭಾರಿ ಕುಸಿತ ಕಂಡಿದೆ.
ಅಗ್ಗದ ಬೆಲೆ ನಿಗದಿಯಾದರೂ, ಕೋಳಿ ಹಾಗೂ ಕೋಳಿ ಮೊಟ್ಟೆಗಳನ್ನು ಕೊಳ್ಳಲು ಗ್ರಾಹಕರೇ ಇಲ್ಲದಂತಾಗಿದೆ. ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಇಂದು ನಾಮಕ್ಕಲ್ ಮೊಟ್ಟೆ ಮಾರುಕಟ್ಟೆ ಧಾರಣೆ 2.65 ರೂ. ಗಳಿಗೆ ಬಂದು ತಲುಪಿದೆ.
ಈ ತಿಂಗಳಿನಲ್ಲಿ ನಾಮಕ್ಕಲ್ ಮೊಟ್ಟೆ ಬೆಲೆ ಕುಸಿತ ಕಂಡ ಪರಿ ಹೀಗಿದೆ.
- 01.03.20: 3.48 ರೂ.
- 02.03.20: 3.48 ರೂ.
- 03.03.20: 3.28 ರೂ. (-20 ಪೈಸೆ ಕಡಿಮೆ)
- 04.03.20: 3.28 ರೂ.
- 05.03.20: 3.08 ರೂ. (-20 ಪೈಸೆ ಕಡಿಮೆ)
- 06.03.20: 3.08 ರೂ.
- 07.03.20: 3.08 ರೂ.
- 08.03.20: 3.13 ರೂ. (+5 ಪೈಸೆ ಹೆಚ್ಚಳ)
- 09.03.20: 3.18 ರೂ. (+5 ಪೈಸೆ ಹೆಚ್ಚಳ )
- 10.03.20: 3.23 ರೂ. (+5 ಪೈಸೆ ಹೆಚ್ಚಳ)
- 11.03.20: 3.23 ರೂ.
- 12.03.20: 3.23 ರೂ.
- 13.03.20: 3.23 ರೂ.
- 14.03.20: 2.90 ರೂ. (-33 ಪೈಸೆ ಕಡಿಮೆ)
- 15.03.20: .2.90 ರೂ.
- 16.03.20: 2.65 ರೂ. (-25 ಪೈಸೆ ಕಡಿಮೆ)