ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಾಗ್ಪುರದ ಎಂಎಸ್ಎಂಇ ಸಚಿವಾಲಯವು ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಪಿಪಿಇ ಕಿಟ್‌ಗಳನ್ನು ತಯಾರಿಸಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಕೇಂದ್ರ ಸಚಿವ ಗಡ್ಕರಿ, ಚೀನಾದಿಂದ ಆಮದು ಮಾಡಿಕೊಳ್ಳುವ ಕಿಟ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಆದ್ದರಿಂದ ನಮ್ಮಲ್ಲೇ ಕಿಟ್‌ಗಳನ್ನು ತಯಾರಿಸುವ ಅವಶ್ಯಕತೆಯಿದೆ ಎಂದಿದ್ದಾರೆ.
-
डॉक्टरों और स्वास्थ्यकर्मियों की सुरक्षा के लिए श्री @nitin_gadkari जी की पहल।#IndiaFightsCorona pic.twitter.com/Wq40TJp7JF
— Office Of Nitin Gadkari (@OfficeOfNG) May 4, 2020 " class="align-text-top noRightClick twitterSection" data="
">डॉक्टरों और स्वास्थ्यकर्मियों की सुरक्षा के लिए श्री @nitin_gadkari जी की पहल।#IndiaFightsCorona pic.twitter.com/Wq40TJp7JF
— Office Of Nitin Gadkari (@OfficeOfNG) May 4, 2020डॉक्टरों और स्वास्थ्यकर्मियों की सुरक्षा के लिए श्री @nitin_gadkari जी की पहल।#IndiaFightsCorona pic.twitter.com/Wq40TJp7JF
— Office Of Nitin Gadkari (@OfficeOfNG) May 4, 2020
500-600 ರೂ ಬೆಲೆಯ ಮೂರು ವಿವಿಧ ಕಿಟ್ಗಳಿದ್ದು, ಇದು ಮಾರುಕಟ್ಟೆ ಬೆಲೆಗಿಂತ ಅಗ್ಗವಾಗಿದೆ. ಅಲ್ಲದೇ ಒಂದು ದಿನಕ್ಕೆ 10,000 ಕಿಟ್‌ಗಳನ್ನು ತಯಾರಿಸಬಹುದು ಎಂದು ಗಡ್ಕರ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿನ ಪಿಪಿಇ ಕಿಟ್‌ಗಳಿಗೆ ಸಾಮಾನ್ಯವಾಗಿ 1500-1600 ರೂ. ವೆಚ್ಚವಾಗುತ್ತದೆ ಮತ್ತು ಇದನ್ನು ವೈದ್ಯರು, ದಾದಿಯರು, ಅರೆವೈದ್ಯಕೀಯ ಪಡೆಗಳು, ಪೌರಕಾರ್ಮಿಕರು ಮತ್ತು ಪೊಲೀಸ್ ಪಡೆಗಳು ಬಳಸಬಹುದು ಎಂದರು.
ಶೀಘ್ರದಲ್ಲೇ ಇತರ ಎಲ್ಲ ರಾಜ್ಯಗಳಿಗೆ ಕಿಟ್‌ಗಳನ್ನು ಕಳುಹಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.