ಹೈದರಾಬಾದ್: ಇದು “ಸುಪ್ರೀಂ” ರೈಲು. ದಾಖಲೆಯ ವೇಗದಲ್ಲಿ ಚಲಿಸುವ ಬುಲೆಟ್ ಟ್ರೈನ್. ಜೊತೆಗೆ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಬಹುದು. ನವೀನ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಜಪಾನ್ ಇತ್ತೀಚೆಗೆ ಟೋಕೈಡೋ-ಶಿಂಕಾನ್ಸೆನ್ ಮಾರ್ಗದಲ್ಲಿ ವಿಶೇಷ ಬುಲೆಟ್ ಟ್ರೈನ್ ಲೋಕಾರ್ಪಣೆ ಮಾಡಿದೆ.
N700S (ಎಸ್ ಎಂದರೆ ಸುಪ್ರೀಂ) ಜಪಾನಿನ ಸದ್ಯ ಜಾಲ್ತಿಯಲ್ಲಿರುವ ಶಿಂಕಾನ್ಸೆನ್ ಹೈಸ್ಪೀಡ್ ರೈಲುಗಳ N700 ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಇದು N700 ಮತ್ತು N700A ಮಾದರಿಗಳ ಸುಧಾರಿತ ತಂತ್ರಜ್ಞಾನವಾಗಿದೆ.
ಸಮಯಪ್ರಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ರಾಷ್ಟ್ರವಾಗಿರುವ ಜಪಾನ್ನ ನಿಪ್ಪಾನ್ ಸಂಸ್ಥೆ ನಿಗದಿತ ಸಮಯದೊಳಗೆ N700S ಟ್ರೈನ್ ಅನ್ನು ಪೂರೈಸಿದೆ. ಬುಲೆಟ್ ಟ್ರೈನ್ ಲೋಕಾರ್ಪಣೆಯನ್ನು ಈ ಮೊದಲು ಟೋಕಿಯೊ ಒಲಿಂಪಿಕ್ಸ್ 2020ರೊಂದಿಗೆ ಪೂರೈಸಲು ನಿರ್ಧರಿಸಲಾಗಿತ್ತು. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತು.
ರೈಲು ಗಂಟೆಗೆ 360 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲದು. ಆದರೆ ಕಾರ್ಯಾಚರಣೆಯ ವೇಗವನ್ನು ಗಂಟೆಗೆ 285 ಕಿಲೋಮೀಟರ್ಗೆ ಮಿತಿಗೊಳಿಸಲಾಗಿದೆ. ಆದಾಗ್ಯೂ ಅದರ ಸುರಕ್ಷತಾ ವ್ಯವಸ್ಥೆಯು ವಿಶಿಷ್ಟ ಲಕ್ಷಣವಾಗಿದೆ. ಶಿಂಕಾನ್ಸೆನ್ ನೆಟ್ವರ್ಕ್ ಭೂಕಂಪದ ಆರಂಭಿಕ ಪತ್ತೆ ವ್ಯವಸ್ಥೆಯನ್ನು ಹೊಂದಿದೆ. ವಿಶೇಷ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಹೊಸ ರೈಲು ಹೆಚ್ಚಿನ ವೇಗದಲ್ಲಿ ಸುರಕ್ಷಿತವಾಗಿ ಮತ್ತು ಸುಲಭವಾಗಿ ನಿಲುಗಡೆ ಹೊಂದಬಲ್ಲದು.
ಇದಲ್ಲದೆ, ರೈಲು ವಿಶ್ವದ ಮೊದಲ ಲಿಥಿಯಂ-ಐಯಾನ್ ಬ್ಯಾಟರಿ ಸ್ವಯಂ-ಚಾಲಿತ ವ್ಯವಸ್ಥೆಯನ್ನು ಹೊಂದಿದೆ. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ವಿದ್ಯುತ್ ಅಭಾವದ ಸಂದರ್ಭದಲ್ಲಿ, ಈ ಸ್ವಯಂ-ಚಾಲನಾ ವ್ಯವಸ್ಥೆಯನ್ನು ಹೊಂದಿರುವ ರೈಲು ಕಡಿಮೆ ಅಂತರದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಇದು ಭೂಕಂಪದ ಸಮಯದಲ್ಲಿ ಹೆಚ್ಚಿನ ಅಪಾಯದ ಪ್ರದೇಶಗಳಿಂದ, ಸುರಂಗ ಮಾರ್ಗಗಳು ಮತ್ತು ಸೇತುವೆಗಳ ಮೂಲಕ ಜನರನ್ನು ಸಾಗಿಸಲು ಸಹಾಯ ಮಾಡುತ್ತದೆ.
ರೈಲಿನ ಒಳಾಂಗಣ ವ್ಯವಸ್ಥೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರಿಗೆ ಆರಾಮವಾಗಿ ಪ್ರಯಾಣಿಸಲು ಆಸನಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಆಸನವು ಪ್ರತ್ಯೇಕ ವಿದ್ಯುತ್ಚಾಲಿತಗೊಂಡಿದೆ. ಪ್ರಯಾಣಿಕರು ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಅವರಿಗೆ ತಮ್ಮ ವಸ್ತುಗಳನ್ನು ನೆನಪಿಸಲು ಮೇಲ್ಚಾವಣಿ ಬ್ಯಾಗೇಜ್ ಸ್ಥಳದಲ್ಲಿ ವಿದ್ಯುತ್ ದೀಪ ಬೆಳಗುತ್ತವೆ. ಸವಾರಿ ಸುಗಮವಾಗಿಸಲು ಹೊಸ ಸಕ್ರಿಯ ಸಸ್ಪೆನ್ಶನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರತಿ ಕಂರ್ಪಾಟ್ ಮೆಂಟ್ ನಲ್ಲಿ ಹೆಚ್ಚಿನ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಶಿಂಕಾನ್ಸೆನ್ ( ಆಡುಮಾತಿನಲ್ಲಿ “ಬುಲೆಟ್ ರೈಲು” ಎಂದು ಕರೆಯಲ್ಪಡುವ ನಗರ ) ನೆಟ್ವರ್ಕ್ 9 ರೈಲು ಮಾರ್ಗಗಳನ್ನು ಹೊಂದಿದೆ, ಇದು ಪ್ರಯಾಣಿಕರನ್ನು ಜಪಾನ್ನ ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಜಪಾನಿನ ಬುಲೆಟ್ ರೈಲುಗಳಿಗೆ ಇತ್ತೀಚಿನ ಸೇರ್ಪಡೆ N700S, ಇದು ಟೋಕಿಯೊವನ್ನು ಒಸಾಕಾ ನಗರದ ಜೊತೆ ಸಂಪರ್ಕಿಸುತ್ತದೆ.
ಜಪಾನ್ 1964 ರಲ್ಲಿ ಬೇಸಿಗೆ ಒಲಿಂಪಿಕ್ಸ್ ಅನ್ನು ಟೋಕಿಯೊದಲ್ಲಿ ಆಯೋಜಿಸಿತ್ತು. ಅದೇ ವರ್ಷದಲ್ಲಿ ಟೋಕಿಯೊ- ಶಿಂಕಾನ್ಸೆನ್ ರೈಲು ಮಾರ್ಗವನ್ನು ಪ್ರಾರಂಭಿಸಿತು, ಒಲಿಂಪಿಕ್ಸ್ನ ಸಮಯದಲ್ಲಿ. ಮೊದಲ ಶಿಂಕಾನ್ಸೆನ್ ಮಾರ್ಗವು ಪ್ರಯಾಣದ ಸಮಯವನ್ನು ಕಡಿಮೆಗೊಳಿಸಿತು, ಟೋಕಿಯೊ ಮತ್ತು ಒಸಾಕಾ ನಡುವೆ ದಿನದ ಪ್ರಯಾಣದ ಹೆಚ್ಚಳಕ್ಕೆ ಈ ಮಾರ್ಗ ಸಹಕಾರಿಯಾಯಿತು.
ಇದು ಜಪಾನ್ನಲ್ಲಿ ವ್ಯವಹಾರ ಮತ್ತು ಜೀವನ ಶೈಲಿಯನ್ನು ಗಮನಾರ್ಹವಾಗಿ ಬದಲಾಯಿಸಿತು. ಎರಡನೆಯ ಮಹಾಯುದ್ಧದ ನಂತರ, ಜಪಾನ್ ತನ್ನ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಪ್ರಾರಂಭಿಸಿತು. ವಾಸ್ತವವಾಗಿ, ಹೈಸ್ಪೀಡ್ ರೈಲ್ವೆ ಮಾರ್ಗಗಳನ್ನು ನಿರ್ಮಿಸಿದ ಮೊದಲ ದೇಶ ಜಪಾನ್. ಇಂದು, ಹಲವಾರು ದೇಶಗಳು ಶಿಂಕಾನ್ ಸೆನ್ ತಂತ್ರಜ್ಞಾನವನ್ನು ಆಧರಿಸಿ ರೈಲುಗಳನ್ನು ನಿರ್ಮಿಸುತ್ತಿವೆ. 1889 ರಲ್ಲಿ, ಟೋಕಿಯೊದಿಂದ ಒಸಾಕಾಕ್ಕೆ ಪ್ರಯಾಣದ ಸಮಯವು ರೈಲಿನಲ್ಲಿ ಹದಿನಾರುವರೆ ಗಂಟೆಗಳನ್ನು ತೆಗೆದುಕೊಂಡಿತು. 1965 ರ ಹೊತ್ತಿಗೆ, ಮೊದಲ ಶಿಂಕಾನ್ಸೆನ್ ಈ ಪ್ರಯಾಣದ ಸಮಯವನ್ನು 3 ಗಂಟೆಗಳ 10 ನಿಮಿಷಗಳಿಗೆ ಇಳಿಸಿತು.