ತೇಜ್‌ಪುರ (ಅಸ್ಸೋಂ): ಈಶಾನ್ಯ ಭಾಗದ ದಂಗೆಕೋರರ ವಿರುದ್ಧ ಮ್ಯಾನ್ಮಾರ್ ಸೇನೆಯು ಮೂರನೇ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂಡೋ-ಮ್ಯಾನ್ಮಾರ್ ಗಡಿಯಲ್ಲಿರುವ ಸಾಗಿಂಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಸನ್‌ರೈಸ್- 3' ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಭಾರತೀಯ ಸೇನೆಯ ಉನ್ನತ ಮೂಲಗಳು ಮತ್ತು ಅಸ್ಸೋಂ ರೈಫಲ್ಸ್ ಈಟಿವಿ ಭಾರತಗೆ ತಿಳಿಸಿವೆ.
ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅಕ್ಟೋಬರ್ ಮೊದಲ ವಾರದಲ್ಲಿ ನೆರೆಯ ದೇಶಕ್ಕೆ ಭೇಟಿ ನೀಡಿದ ಕೆಲ ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಅವರೊಂದಿಗೆ ಜನರಲ್ ನರವಣೆ ಅವರು ಮ್ಯಾನ್ಮಾರ್ ಸರ್ಕಾರದ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಭಾರತ ಮತ್ತು ಮ್ಯಾನ್ಮಾರ್ ಸೈನ್ಯದ ನಡುವಿನ ಪ್ರಾದೇಶಿಕ ಭದ್ರತೆ, ಅಂತರ ಕಾರ್ಯಾಚರಣೆ ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಈ ಚರ್ಚಿಸಿದ್ದರು.
![Operation Place](https://etvbharatimages.akamaized.net/etvbharat/prod-images/sagaing-region-map_2910newsroom_1603974066_1018.jpg)
ಭಾರತೀಯ ನಿಯೋಗ ಸೇನಾ ಮುಖ್ಯಸ್ಥರು ಮತ್ತು ಮ್ಯಾನ್ಮಾರ್ ಸೇನಾ ಡೆಪ್ಯುಟಿ ಮುಖ್ಯಸ್ಥರನ್ನು ಭೇಟಿ ಆಗಿದ್ದರು ಎಂದು ಮೂಲಗಳು ತಿಳಿಸಿವೆ.
ನರವಣೆ ಮ್ಯಾನ್ಮಾರ್ ಭೇಟಿಯ ಸಂದರ್ಭದಲ್ಲಿ ಆಪರೇಷನ್ ಸನ್‌ರೈಸ್ 3 ನೀಲನಕ್ಷೆ ಸಿದ್ಧಪಡಿಸಲಾಗಿದೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಸಂಬಂಧ ಇತ್ತೀಚಿನ ದಿನಗಳಲ್ಲಿ ಸುಧಾರಿಸುತ್ತಿದೆ. ತನ್ನ ನೆಲದ ಭಾರತೀಯ ವಿರೋಧಿ ಚಟುವಟಿಕೆಗಳಿಗೆ ಬಳಸಲು ಅನುಮತಿಸಬಾರದು ಎಂಬ ಭಾರತದ ಮನವಿಯನ್ನು ಮ್ಯಾನ್ಮಾರ್ ನಿರಾಕರಿಸುವುದು ಅಸಂಭವವಾಗಿದೆ.
ಎನ್‌ಎಸ್‌ಸಿಎನ್ (ಕೆ), ಉಲ್ಫಾ (ಇಂಡಿಫೆಂಡೆಂಟ್) ಮತ್ತು ಮಣಿಪುರ ಮೂಲದ ಕೆಲವು ದಂಗೆಕೋರರು ತಮ್ಮ ಶಿಬಿರಗಳನ್ನು ಮ್ಯಾನ್ಮಾರ್‌ನಲ್ಲಿ ಹೊಂದಿದ್ದಾರೆ. ಈ ಶಿಬಿರಗಳು ಭಾರತೀಯ ಗಡಿಭಾಗದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುತ್ತವೆ. ಗಡಿಯುದ್ದಕ್ಕೂ ಹಬ್ಬಿಕೊಂಡಿರುವ ದಟ್ಟವಾದ ಅರಣ್ಯದ ಲಾಭ ಪಡೆದುಕೊಂಡು ಒಳ ನುಸುಳುವಿಕೆ ಕೃತ್ಯ ಎಸಗುತ್ತಿದ್ದಾರೆ.
ಅಸ್ಸಾಂ ರೈಫಲ್ಸ್‌ನ ಮೂಲಗಳು ಸೈನ್ಯವನ್ನು ಎಚ್ಚರಿಸಿದೆ ಮತ್ತು ದಂಗೆಕೋರರ ಯಾವುದೇ ಸದಸ್ಯರಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಗಡಿಯಲ್ಲಿ ಕಠಿಣ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದೆ.
2019ರಲ್ಲಿ ಟಾಟ್ಮ್ಡಾವ್ ಆಪರೇಷನ್ ಸನ್‌ರೈಸ್ ಕೈಗೆತ್ತಿಕೊಳ್ಳಲಾಯಿತು. ಕಳೆದ ವರ್ಷ ಫೆಬ್ರವರಿ 17ರಿಂದ ಮಾರ್ಚ್ 2ರವರೆಗೆ ಆಪರೇಷನ್ ಸನ್‌ರೈಸ್ 1 ಕಾರ್ಯಾಚರಣೆ ಪ್ರಾರಂಭಿಸಲಾಯಿತು.ಇದೇ ಹೆಸರಿನ ಎರಡನೇ ಕಾರ್ಯಾಚರಣೆ ಕಳೆದ ವರ್ಷ ಮೇ 16ರಂದು ನಡೆಯಿತು.
ಸನ್‌ರೈಸ್-2 ವೇಳೆ ಮ್ಯಾನ್ಮಾರ್ ಸೈನ್ಯವು ತನ್ನ 13 ಜನರನ್ನು ಕಳೆದುಕೊಂಡಿತ್ತು ಎಂದು ಮಿಲಿಟರಿ ಗುಪ್ತಚರ ಮೂಲಗಳು ತಿಳಿಸಿವೆ. ಆ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ಸೇನೆಯು 22 ಬಂಡುಕೋರರನ್ನು ವಶಪಡಿಸಿಕೊಂಡಿತ್ತು. ಭಾರತ ಮತ್ತು ಮ್ಯಾನ್ಮಾರ್ 1,640 ಕಿ.ಮೀ. ಉದ್ದ ಅಂತಾರಾಷ್ಟ್ರೀಯ ಗಡಿರೇಖೆ ಹಂಚಿಕೊಂಡಿವೆ. ಈ ವ್ಯಾಪ್ತಿಯಲ್ಲಿ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಬರುತ್ತವೆ.