ಪಾಟ್ನಾ (ಬಿಹಾರ): ತಮ್ಮ ತಂದೆ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಕೊರೊನಾ ಸೋಂಕು ಬರುವ ಅಪಾಯವಿದೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಹೇಳಿದ್ದಾರೆ.
72 ನೇ ವಯಸ್ಸಿನಲ್ಲಿ ದೀರ್ಘಕಾಲದ ಕಾಯಿಲೆಗಳೊಂದಿಗೆ ಬಳಲುತ್ತಿರುವ ಅವರು ಕೊರೊನಾ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಅವರಿಗೆ ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಕಾಳಜಿ ವಹಿಸಲಾಗಿದೆ ಎಂದು ತೇಜಶ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
-
It’s really worrisome to know about the doctors treating my dad may hv got infected to #COVID. I join 12 crore Biharis to echo their concerns. At 72 with multiple life threatening chronic diseases, He is most vulnerable to #Corona & hence shd be taken care with utmost precaution. https://t.co/1z0tBc6upB
— Tejashwi Yadav (@yadavtejashwi) April 28, 2020 " class="align-text-top noRightClick twitterSection" data="
">It’s really worrisome to know about the doctors treating my dad may hv got infected to #COVID. I join 12 crore Biharis to echo their concerns. At 72 with multiple life threatening chronic diseases, He is most vulnerable to #Corona & hence shd be taken care with utmost precaution. https://t.co/1z0tBc6upB
— Tejashwi Yadav (@yadavtejashwi) April 28, 2020It’s really worrisome to know about the doctors treating my dad may hv got infected to #COVID. I join 12 crore Biharis to echo their concerns. At 72 with multiple life threatening chronic diseases, He is most vulnerable to #Corona & hence shd be taken care with utmost precaution. https://t.co/1z0tBc6upB
— Tejashwi Yadav (@yadavtejashwi) April 28, 2020
ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ನಲ್ಲಿ ಆರ್‌ಜೆಡಿ ನಾಯಕ ಲಾಲೂ ಯಾದವ್‌ಗೆ ಚಿಕಿತ್ಸೆ ನೀಡುತ್ತಿದ್ದ ವಾರ್ಡ್ನಲ್ಲಿದ್ದ ರೋಗಿಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದೆ. ಕಳೆದ ಮೂರು ವಾರಗಳಿಂದ ಔಷಧ ವಿಭಾಗದಲ್ಲಿ ದಾಖಲಾದ ರೋಗಿಯೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಲಾಲೂ ಪ್ರಸಾದ್ ಯಾದವ್ ಕೂಡ ಅದೇ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಡಾ.ಉಮೇಶ್ ಪ್ರಸಾದ್ ಅವರ ಚಿಕಿತ್ಸೆಯ ವೈದ್ಯ ಎಂದು ರಿಮ್ಸ್ ಆಡಳಿತ ಮಂಡಳಿ ಹೇಳಿದೆ.
ಹೊಸ ಕೋವಿಡ್ ಸೋಂಕಿತ ಔಷಧ ವಿಭಾಗದಲ್ಲಿ ಮೂರು ವಾರಗಳ ಕಾಲ ಇದ್ದುದರಿಂದ, ಎಲ್ಲ ವೈದ್ಯರು ಮತ್ತು ಇತರ ಸಿಬ್ಬಂದಿ ತಮ್ಮ ಮಾದರಿಗಳನ್ನು ನೀಡುತ್ತಿದ್ದಾರೆ. ಡಾ. ಉಮೇಶ್ ಪ್ರಸಾದ್ ಮತ್ತು ಅವರ ಘಟಕವನ್ನು ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ತಿಳಿಸಿದೆ.
ಜಾರ್ಖಂಡ್‌ನಲ್ಲಿ ನಡೆದ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಶಿಕ್ಷೆಯ ಬಹುಪಾಲು ಭಾಗವನ್ನು ರಿಮ್ಸ್‌ನಲ್ಲಿ ಚಿಕಿತ್ಸೆಯಲ್ಲೇ ಕಳೆದಿದ್ದಾರೆ.