ಬರೇಲಿ (ಉತ್ತರ ಪ್ರದೇಶ): ಅಖಿಲ ಭಾರತ ತಂಜೀಮ್ ಉಲೇಮಾ-ಇ-ಇಸ್ಲಾಂ ಸಂಘಟನೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಫತ್ವಾ ಹೊರಡಿಸಿದೆ.
ಸಮುದಾಯದ ಎಲ್ಲಾ ಸದಸ್ಯರು ಕೂಡಾ ಚೀನಾ ಉತ್ಪನ್ನಗಳನ್ನು ಬಳಸಬಾರದು. ಈ ಸಮಯದಲ್ಲಿ ನಾವು ಸೈನ್ಯ ಮತ್ತು ಸರ್ಕಾರದೊಂದಿಗೆ ನಿಲ್ಲೋಣ ಎಂದು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಬುದ್ದೀನ್ ರಿಜ್ವಿ ತಿಳಿಸಿದ್ದಾರೆ.
ಭಾರತೀಯ ಭೂಮಿಯನ್ನು ಅತಿಕ್ರಮಿಸಲು ಚೀನಾ ಮಾಡಿದ ಪಿತೂರಿ ಮತ್ತು ಧೈರ್ಯಶಾಲಿ ಸೈನಿಕರ ಹತ್ಯೆಯನ್ನು ಫತ್ವಾದಲ್ಲಿ ಖಂಡಿಸಲಾಗಿದೆ.