ಕೊಚ್ಚಿ(ಕೇರಳ): ಅರ್ಎಸ್ಎಸ್ ಕಾರ್ಯಕರ್ತ ತೊಝಿಯೂರ್ ಸುನಿಲ್ ಕೊಲೆಯಾದ 25 ವರ್ಷಗಳ ಬಳಿಕೆ ಪ್ರಕರನವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾವಕ್ಕಡದ ಮೌನುದ್ದೀನ್ ಎಂಬುವನನ್ನು ಬಂಧಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಪಿಎಂ ಕಾರ್ಯಕರ್ತರಾದ ಬಾಬುರಾಜ್, ಬಿಜಿ, ಹರಿದಾಸ್, ಮತ್ತು ರಫಿಕ್ ಎಂಬುವರಿಗೆ 33 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಬೇರೊಂದು ಕೊಲೆ ಪ್ರಕರಣ ಭೇದಿಸಲು ಹೊರಟ ಪೊಲೀಸ್ ಇಲಾಖೆಗೆ ಸಿಕ್ಕ ಆಧಾರಗಳ ಮೇಲೆ ಮೊಯಿನುದ್ದೀನನ್ನು ಬಂಧಿಸಲಾಗಿದೆ. ಈಗಾಗಲೇ ತಪ್ಪಿತಸ್ಥರೆಂದು ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸಿಪಿಎಂ ಕಾರ್ಯಕರ್ತರನ್ನು 3 ವರ್ಷಗಳ ನಂತರ ಬಿಡುಗಡೆಗೊಳಿಸಲಾಗಿದೆ.
1994 ರ ಡಿಸೆಂಬರ್ 4 ರಂದು ಈ ಆರ್ಎಸ್ಎಸ್ ಕಾರ್ಯಕರ್ತನ ಕೊಲೆ ನಡೆದಿತ್ತು. ಗುರುವಾಯೂರ್ನಲ್ಲಿರುವ ಅವರ ನಿವಾಸದಲ್ಲಿಯೇ ಬರ್ಬರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ದಾಳಿಯ ವೇಳೆ ಸುನಿಲ್ ಅವರ ಕುಟುಂಬ ಸದಸ್ಯರ ಮೇಲೂ ಹಲ್ಲೆ ನಡೆದಿತ್ತು.