ETV Bharat / bharat

ಗಂಡ ಹೆಂಡತಿ ಜಗಳ ಇಲ್ಲಿ ಕೊಲೆಯಾಗುವ ತನಕ! ಪತಿಯನ್ನು 11 ಸಲ ಇರಿದು ಹತ್ಯೆಗೈದ ಪತ್ನಿ - ಗಂಡನ ಕೊಲೆ

ಗಂಡನೊಂದಿಗೆ ಜಗಳ ಮಾಡಿ ಕೋಪಗೊಂಡ ಪತ್ನಿ ನಿದ್ದೆಯಲ್ಲಿದ್ದ ಆತನನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ನಲ್ಲಸೋಪರ್​ ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Aug 22, 2019, 4:39 PM IST

ಮುಂಬೈ: 33 ವರ್ಷದ ಮಹಿಳೆಯೊಬ್ಬಳು ನಿದ್ರೆಯಲ್ಲಿದ್ದ ಪತಿಯನ್ನು ಚಾಕುವಿನಿಂದ 11 ಸಲ ಇರಿದು ಹತ್ಯೆಗೈದಿರುವ ಪ್ರಕರಣ ಮಹಾರಾಷ್ಟ್ರದ ನಲ್ಲಸೋಪರ್​ದಲ್ಲಿ ನಡೆದಿದೆ. ಘಟನೆಯ ನಂತರ ಆತ ಖುದ್ದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾಳೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗಂಡ ಸುನೀಲ್​ ಕದಂ ಹಾಗೂ ಪತ್ನಿ ಪ್ರಾಣಾಲಿ ಕಳೆದ (ಬುಧವಾರ) ರಾತ್ರಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದಾದ ಬಳಿಕ ಗಂಡ ನಿದ್ದೆಗೆ ಜಾರಿದ್ದಾನೆ. ಈ ಸಂದರ್ಭ ಅಡುಗೆ ಮನೆಗೆ ತೆರಳಿರುವ ಪತ್ನಿ, ಚಾಕುವಿನಿಂದ ಗಂಡನ ಹೊಟ್ಟೆ ಹಾಗೂ ಕುತ್ತಿಗೆಗೆ 11 ಸಲ ಇರಿದಿದ್ದಾಳೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತದನಂತರ ಹೊರಗಡೆ ಬಂದು ಕಿರುಚಿಕೊಂಡಿರುವ ಪತ್ನಿ, ಗಂಡನ ತಂದೆ ಹಾಗೂ ತಾಯಿಯ ಬಳಿ ಸುನೀಲ್​​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸುನೀಲ್ ಅವರ​ ತಂದೆ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ನಡೆದ ಪೊಲೀಸ್ ವಿಚಾರಣೆ ವೇಳೆ ಗಂಡನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ ಪೊಲೀಸರು, ಹೆಂಡತಿ ಪ್ರಾಣಾಲಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್​​ 302 (ಕೊಲೆ​​)ರ ಅಡಿ ದೂರು ದಾಖಲಿಸಿದ್ದಾರೆ.

Intro:Body:

ನಿದ್ರೆಯಲ್ಲಿದ್ದ ಗಂಡನನ್ನ 11ಸಲ ಇರಿದು ಕೊಲೆ... ತಾನೇ ಸೂಸೈಡ್​​ ಮಾಡಿಕೊಂಡಿದ್ದಾನೆಂದ ಪತ್ನಿ! 

ಮುಂಬೈ: 33 ವರ್ಷದ ಮಹಿಳೆಯೋರ್ವಳು ನಿದ್ರೆಯಲ್ಲಿದ್ದ ಗಂಡನನ್ನ 11 ಸಲ ಇರಿದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಲ್ಲಸೋಪರ್​ದಲ್ಲಿ ನಡೆದಿದೆ. ತದನಂತರ ಆತ ಖುದ್ದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಮುಂದೆ ಸುಳ್ಳು ಹೇಳಿದ್ದಾಳೆ. 

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗಂಡ ಸುನೀಲ್​ ಕದಂ ಹಾಗೂ ಪತ್ನಿ ಪ್ರಾಣಾಲಿ ನಿನ್ನೆ ರಾತ್ರಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದಾದ ಬಳಿಕ ಗಂಡ ಬೆಡ್​​ರೂಮ್​​ನಲ್ಲಿ ಮಲಗುವುದಕ್ಕಾಗಿ ತೆರಳಿದ್ದಾನೆ. ಅಡುಗೆ ಮನೆಗೆ ತೆರಳಿರುವ ಪತ್ನಿ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಗಂಡನ ಹೊಟ್ಟೆ ಹಾಗೂ ಕುತ್ತಿಗೆಗೆ 11 ಸಲ ಇರಿದಿದ್ದಾಳೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ತದನಂತರ ಹೊರಗಡೆ ಬಂದು ಕಿರುಚಿಕೊಂಡಿರುವ ಆಕೆ, ಗಂಡನ ತಂದೆ ಹಾಗೂ ತಾಯಿಗೆ ಸುನೀಲ್​​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾಳೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್​ ತಂದೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಆಕೆ ಗಂಡನನ್ನ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. 

ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ ಪೊಲೀಸರು, ಹೆಂಡತಿ ಪ್ರಾಣಾಲಿ ವಿರುದ್ಧ ಸೆಕ್ಷನ್​​ 302(ಮರ್ಡರ್​​)ರ ಅಡಿ ದೂರು ದಾಖಲು ಮಾಡಿಕೊಂಡು, ಪೊಲೀಸ್​ ಕಂಬಿ ಹಿಂದೆ ತಳ್ಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.