ETV Bharat / bharat

ಕುಟುಂಬ ಸೇರುವ ಬಯಕೆಯಲ್ಲಿ ತವರಿಗೆ ಮರಳಿದ ಕಾರ್ಮಿಕ: ಕ್ವಾರಂಟೈನ್​ ಕೇಂದ್ರದಲ್ಲಿ ದಾರುಣ ಸಾವು - ಗಣಪತ್ ಸಹೈ ಪಿ.ಜಿ. ಕಾಲೇಜಿನ ಕ್ವಾರಂಟೈನ್​​​ ಕೇಂದ್ರ

ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುಲ್ತಾನಪುರದ ನಿವಾಸಿಯನ್ನು ಅನಾರೋಗ್ಯದ ಕಾರಣ ಗಣಪತ್ ಸಹೈ ಪಿ.ಜಿ. ಕಾಲೇಜಿನ ಕ್ವಾರಂಟೈನ್​​​ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಕಾರ್ಮಿಕ ಸಾವನ್ನಪ್ಪಿದ್ದು, ಹೆಚ್ಚಿನ ಪರೀಕ್ಷೆಗಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

mumbai-returnee-dies-at-quarantine-centre-in-sultanpur
ಮುಂಬೈನಿಂದ ಮರಳಿದ ಕಾರ್ಮಿಕ
author img

By

Published : May 25, 2020, 5:22 PM IST

ಸುಲ್ತಾನಪುರ: ಮಹಾರಾಷ್ಟ್ರದಿಂದ ಹಿಂದಿರುಗಿದ ಕಾರ್ಮಿಕನೊಬ್ಬ ಅನಾರೋಗ್ಯದಿಂದ ಬಳಲಿದ್ದು ಪರಿಣಾಮ ಆತನ ಕುಟುಂಬಸ್ಥರು ಹತ್ತಿರದಲ್ಲಿನ ಕ್ವಾರಂಟೈನ್​​ ಕೇಂದ್ರಕ್ಕೆ ಸೇರಿಸಿದ್ದರು. ಆದ್ರೆ ಈಗಾಗಲೇ ಅಶಕ್ತನಾಗಿದ್ದ ವ್ಯಕ್ತಿ ತನ್ನ ಕೊನೆಯುಸಿರೆಳೆದಿದ್ದಾನೆ.

ಮುಂಬೈನಲ್ಲಿ ಬಟ್ಟೆಗಳನ್ನು ಹೊಲಿಯುತ್ತಿದ್ದ ಮೃತ ಫಿರೋಜ್, ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದ ತನ್ನ ಕುಟುಂಬವನ್ನು ಸಾಕುತ್ತಿದ್ದರು. ಭಾನುವಾರ, ಅವರು ನೇರವಾಗಿ ರೈಲಿನ ಮೂಲಕ ಲಖನೌ ತಲುಪಿದ್ದು, ಕೆಲವು ಗಂಟೆಗಳ ನಂತರ ಖಾಸಗಿ ವಾಹನದಲ್ಲಿ ತಮ್ಮ ಮನೆಗೆ ಸೇರಿದ್ದರು.

ಮುಂಬೈನಿಂದ ತವರೂರಿಗೆ ಮರಳಿದ ಕಾರ್ಮಿಕ ಸಾವು

ಸ್ವಲ್ಪ ಸಮಯದ ನಂತರ, ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದ್ದು,ನಂತರ ಅವರನ್ನು ಕುಟುಂಬದ ಸದಸ್ಯರು ಸಮೀಪದ ಗಣಪತ್ ಸಹೈ ಪಿ.ಜಿ. ಕಾಲೇಜ್​​ನ ಕ್ವಾರಂಟೈನ್​ ಸೆಂಟರ್​​ಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಪ್ರಜ್ಞೆ ಕಳೆದುಕೊಂಡ ಫಿರೋಜ್ ಮೃತಪಟ್ಟಿದ್ದಾರೆ.

ಅವರ ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಪರೀಕ್ಷೆಗಾಗಿ ದೇಹದಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.