ETV Bharat / bharat

ಕರ್ತವ್ಯದಲ್ಲಿದ್ದ ಮುಂಬೈನ ರೈಲ್ವೆ ಪೊಲೀಸ್‌ ಪೇದೆಗೆ ಕೊರೊನಾ ಪಾಸಿಟಿವ್‌..

ಮಹಾರಾಷ್ಟ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 9 ಸಾವು ಸೇರಿ 216 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ.

Mumbai Railway Police officer tested positive from corona
ಕೊರೊನಾ: ಮುಂಬೈನಲ್ಲಿ ಸೇವೆಯಲ್ಲಿದ್ದ ಪೊಲೀಸ್ ಪೇದೆಗೆ ಕೊರೊನಾ ದೃಢ
author img

By

Published : Apr 1, 2020, 8:10 PM IST

ಮುಂಬೈ : ಕೊರೊನಾ ವೈರಸ್ ಮಹಾಮಾರಿ ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ನಡುವೆ ಮುಂಬೈ ರೈಲ್ವೆ ಪೊಲೀಸ್​ ಪೇದೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಪೊಲೀಸ್​ ಪೇದೆಯನ್ನು ನಗರದ ಕಲ್ಯಾಣ್​ ಪ್ರದೇಶದ ಕಸ್ತೂರ್ಬಾ ರುಕ್ಮಿಣಿ ಬಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಪೇದೆ ಮಾರ್ಚ್​ 15 ರಿಂದ 27ರವರೆಗೆ ಸುಮಾರು 32 ಮಂದಿ ಇತರೆ ಅಧಿಕಾರಿಗಳ ಜೊತೆ ಸಂಪರ್ಕಕ್ಕೆ ಬಂದಿರುವುದು ಪತ್ತೆಯಾಗಿದೆ.

ಸದ್ಯ ಆ 32 ಅಧಿಕಾರಿಗಳನ್ನೂ ಪತ್ತೆ ಮಾಡಲಾಗಿದೆ. ಅವರಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಮಹಾರಾಷ್ಟ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 9 ಸಾವು ಸೇರಿ 216 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಭಾರತದಲ್ಲಿ ಒಟ್ಟು 35 ಸಾವು ಸೇರಿದಂತೆ 1,397 ಕೊರೊನಾ ವೈರಸ್ ಪ್ರಕರಣ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.