ಮುಂಬೈ: ಲಾಕ್ಡೌನ್ ಸಮಯದಲ್ಲಿ ಜನರು ತಮ್ಮ ಮನೆಗಳಿಂದ ಹೊರ ಬರದಂತೆ ಎಚ್ಚರಿಸುವ ಉದ್ದೇಶದಿಂದ ಮುಂಬೈ ಪೊಲೀಸರು ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಗಲ್ಲಿ ಬಾಯ್ ಚಿತ್ರದ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ.
ಗಲ್ಲಿ ಬಾಯ್ ಚಿತ್ರದಲ್ಲಿ ಆಲಿಯಾ ನಗುತ್ತಿರುವ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪೊಲೀಸರು, 'ಲಾಕ್ಡೌನ್ ಸಮಯದಲ್ಲಿ ವಾಕ್ ಮಾಡಲು ಹೋಗುತ್ತೇನೆಂದು ಅವನು ಹೇಳಿದಾಗ ಆ ನಗು' ಎಂದು ಉಲ್ಲೇಖಿಸಿ ಬರೆದುಕೊಂಡಿದ್ದಾರೆ.
ಮುಂಬೈ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ ಶೀರ್ಷಿಕೆ ಇನ್ನಷ್ಟು ತಮಾಷೆಯಾಗಿದ್ದು, ಅಬಾರ್ಟ್ ಮಿಷನ್. ವಿ ರಿಪೀಟ್, ಅಬಾರ್ಟ್ ಮಿಷನ್! # ಸ್ಟೇಹೋಮ್ # ಸ್ಟೇ ಸೇಫ್ ಎಂದು ಬರೆದುಕೊಂಡಿದ್ದಾರೆ.
ಇಷ್ಟೇ ಅಲ್ಲದೇ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಮುಂಬೈ ಪೊಲೀಸರು ವಿವಿಧ ಚಲನಚಿತ್ರಗಳ ಬರಹಗಳನ್ನ ಹಂಚಿಕೊಳ್ಳುತ್ತಿದ್ದಾರೆ.
-
Abort mission. We repeat - Abort Mission! #StayHome #StaySafe pic.twitter.com/vmZkFTXDbG
— Mumbai Police (@MumbaiPolice) April 21, 2020 " class="align-text-top noRightClick twitterSection" data="
">Abort mission. We repeat - Abort Mission! #StayHome #StaySafe pic.twitter.com/vmZkFTXDbG
— Mumbai Police (@MumbaiPolice) April 21, 2020Abort mission. We repeat - Abort Mission! #StayHome #StaySafe pic.twitter.com/vmZkFTXDbG
— Mumbai Police (@MumbaiPolice) April 21, 2020
ಇತ್ತೀಚೆಗೆ, ಮುಂಬೈ ಪೊಲೀಸರು 2018 ರಲ್ಲಿ ಶ್ರದ್ಧಾ ಕಪೂರ್ ಅಭಿನಯಿಸಿದ್ದ ಹಾರರ್ ಸಿನೆಮಾದಲ್ಲಿನ ಒಂದು ಸಂಭಾಷಣೆಯನ್ನು ಉಲ್ಲೇಖಿಸುವ ವಿಶೇಷ ಕೊರೊನಾ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು.
ಅದು "ಓ ಕರೋನಾ ಕಭಿ ಮತ್ ಆನಾ" (ಓ ಕರೋನಾ, ಎಂದಿಗೂ ಬರಬೇಡ) ಎಂಬುದಾಗಿತ್ತು. ಇದು ಪ್ರತಿ ಬೀದಿಯನ್ನು ಸುರಕ್ಷಿತವಾಗಿಡುವ ಸಂದೇಶದೊಂದಿಗೆ ಬರೆಯಲಾಗಿದ್ದು, ಚಲನಚಿತ್ರದ ಸಂಭಾಷಣೆಯಂತೆಯೇ ಗೋಡೆಯ ಮೇಲೆ ಬರೆಯಲಾಗಿತ್ತು.