ಮುಂಬೈ: ಉದಯೋನ್ಮುಖ ರೂಪದರ್ಶಿ ಮಾನ್ಸಿ ದೀಕ್ಷಿತ್ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದೆ.
ಕಳೆದ ವರ್ಷದ ಅಕ್ಟೋಬರ್ 15ರಂದು 19 ವರ್ಷದ ಸೈಯದ್ ಮುಜಾಮಿಲ್ ಎನ್ನುವಾತ ಮಾನ್ಸಿ ದೀಕ್ಷಿತ್ಳನ್ನು ಮುಂಬೈನ ಆಕೆಯ ಫ್ಲಾಟ್ನಲ್ಲಿ ಕೊಲೆ ಮಾಡಿದ್ದ.
ಸದ್ಯ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಸೈಯದ್, ಮಾನ್ಸಿ ತನ್ನ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಳು. ಜೊತೆಗೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ಅರ್ಜಿಯಲ್ಲಿ ವಿವರಿಸಿದ್ದಾನೆ.
ಸೈಯದ್ ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಏಪ್ರಿಲ್ 3ರಂದು ನಡೆಸುವ ಸಾಧ್ಯತೆ ಇದೆ.