ETV Bharat / bharat

ಮೃತಪಟ್ಟ ಭಿಕ್ಷುಕನ ಮನೆ ಶೋಧ ವೇಳೆ ಪೊಲೀಸರಿಗೆ ಶಾಕ್​​... ಬ್ಯಾಂಕ್​ ಖಾತೆಯಲ್ಲಿ ಲಕ್ಷ ಲಕ್ಷ ಹಣ!

ಕೆಲವು ಭಿಕ್ಷುಕರು ಹೆಸರಿಗಷ್ಟೇ ಭಿಕ್ಷುಕರಾಗಿರುತ್ತಾರೆ. ಅಸಲಿಗೆ ಅವರ ಬಳಿ ಲಕ್ಷಾಂತರ ರೂಪಾಯಿ ಹಣ ಇರುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಭಿಕ್ಷುಕನ ಮನೆಯಲ್ಲಿ ಲಕ್ಷ ಲಕ್ಷ ಹಣ
author img

By

Published : Oct 7, 2019, 9:49 PM IST

ಮುಂಬೈ: ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ 62 ವರ್ಷದ ಭಿಕ್ಷುಕನೋರ್ವ ಸಾವನ್ನಪ್ಪಿದ್ದು, ಆತನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವ ಪೊಲೀಸರಿಗೆ ಶಾಕ್​ ಆಗಿದೆ.

ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಬಿರ್ಜು ಚಂದ್ರ ಅಜಾದ್ ಮುಂಬೈನ ಗೋವಂದಿ ಪ್ರದೇಶದ ಸ್ಲಂ ನಿವಾಸಿಯಾಗಿದ್ದು, ನಿನ್ನೆ ರೈಲ್ವೆ ಹಳಿ ದಾಟುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಪಾನ್ ಕಾರ್ಡ್​, ಆಧಾರ್​ ಕಾರ್ಡ್ ಮತ್ತು ವೋಟರ್ ಐಡಿ ದೊರೆತಿವೆ. ಅಲ್ಲದೆ ವಿವಿಧ ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದ ಎಂದು ತಿಳಿದು ಬಂದಿದೆ. ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಬಕೆಟ್‌ಗಳಲ್ಲಿ, ಪಾತ್ರೆಗಳಲ್ಲಿ, ಬ್ಯಾಗ್​ಗಳಲ್ಲಿ ಹಣ ನೋಡಿರುವ ಪೊಲೀಸರು ಒಂದು ಕ್ಷಣ ಶಾಕ್​ಗೊಳಗಾಗಿದ್ದಾರೆ.

Mumbai Beggar man
ಭಿಕ್ಷುಕನ ಮನೆಯಲ್ಲಿ ಲಕ್ಷ ಲಕ್ಷ ಹಣ

ಇನ್ನು ಬ್ಯಾಂಕ್​ನಲ್ಲಿ ಠೇವಣಿ ರೂಪದಲ್ಲಿ ಬರೋಬ್ಬರಿ 8.77 ಲಕ್ಷ ರೂ. ಹಾಗೂ ಮನೆಯಲ್ಲೇ 1.5 ಲಕ್ಷ ರೂ. ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿದ್ದ ಚಿಲ್ಲರೆ ಹಣ ಬರೋಬ್ಬರಿ 8 ಗಂಟೆಗಳ ಕಾಲ ಎಣಿಕೆ ಮಾಡಿದ್ದಾರೆ. ಸದ್ಯ ಭಿಕ್ಷುಕನ ಸಂಬಂಧಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಿಕ್ಷುಕರು ಹೆಸರಿಗಷ್ಟೇ ಭಿಕ್ಷುಕರಾಗಿರುತ್ತಾರೆ. ಅಸಲಿಗೆ ಅವರ ಬಳಿ ಲಕ್ಷಾಂತರ ರೂ. ಹಣ ಇರುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.

Intro:Body:

ರೈಲ್ವೆ ಹಳಿ ದಾಟುವಾಗ ಭಿಕ್ಷುಕ ಸಾವು; ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ ಹಣ... ಚಿಲ್ಲರೆ ಎಣಿಸಲು 8ಗಂಟೆ!

ಮುಂಬೈ: ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ  62 ವರ್ಷದ ಭಿಕ್ಷುಕನೋರ್ವ ಸಾವನ್ನಪ್ಪಿದ್ದು, ಆತನ ಮನೆಯಲ್ಲಿ ಶೋಧಕಾರ್ಯಾಚರಣೆ ನಡೆಸಿರುವ ಪೊಲೀಸರಿಗೆ ಶಾಕ್​ ಆಗಿದೆ. 

ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಬಿರ್ಜು ಚಂದ್ರ ಅಜಾದ್ ಮುಂಬೈನ ಗೋವಂದಿ ಪ್ರದೇಶದ ಸ್ಲಂ ನಿವಾಸಿಯಾಗಿದ್ದು, ನಿನ್ನೆ ರೈಲ್ವೆ ಹಳಿ ದಾಟುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಪಾನ್ ಕಾರ್ಡ್​, ಆಧಾರ್​ ಕಾರ್ಡ್ ಮತ್ತು ವೋಟರ್ ಐಡಿ ದೊರೆತಿದ್ದು, ವಿವಿಧ ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದನು ಎಂದು ತಿಳಿದು ಬಂದಿದೆ. ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಬಕೆಟ್‌ಗಳಲ್ಲಿ, ಪಾತ್ರೆಗಳಲ್ಲಿ, ಬ್ಯಾಗ್​ಗಳಲ್ಲಿ ಹಣ ನೋಡಿರುವ ಪೊಲೀಸರು ಬಂದು ಕ್ಷಣ ಶಾಕ್​ಗೊಳಗಾಗಿದ್ದಾರೆ. 

ಇನ್ನು ಬ್ಯಾಂಕ್​ನಲ್ಲಿ ಠೇವಣಿ ರೂಪದಲ್ಲಿ ಬರೋಬ್ಬರಿ 8.77 ಲಕ್ಷ ರೂ ಹಾಗೂ ಮನೆಯಲ್ಲೇ 1.5 ಲಕ್ಷ ರೂ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಮನೆಯಲ್ಲಿದ್ದ ಚಿಲ್ಲರೆ ಹಣ ಬರೋಬ್ಬರಿ 8 ಗಂಟೆಗಳ ಕಾಲ ಎಣಿಕೆ ಮಾಡಿದ್ದಾರೆ. ಸದ್ಯ ಭಿಕ್ಷುಕನ ಸಂಬಂಧಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಿಕ್ಷುಕರು ಹೆಸರಿಗಷ್ಟೇ ಭಿಕ್ಷುಕರಾಗಿರುತ್ತಾರೆ. ಅಸಲಿಗೆ ಅವರ ಬಳಿ ಲಕ್ಷಾಂತರ ಹಣ ಇರುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.