ಇಂದೋರ್ (ಮಧ್ಯ ಪ್ರದೇಶ): ಕೊರೊನಾ ಅವಧಿಯಲ್ಲಿ ಜನರೊಂದಿಗೆ ಹೆಚ್ಚು ಸಕ್ರಿಯರಾಗಿದ್ದ ಸಂಸದರಲ್ಲಿ ಇಂದೋರ್ ಸಂಸದ ಶಂಕರ್ ಲಾಲ್ವಾನಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಅವರ ತಂಡ ನಡೆಸಿದ ಸಮೀಕ್ಷೆಯಲ್ಲಿ ಸಂಸದ ಶಂಕರ್ ಲಾಲ್ವಾನಿ ಪ್ರಥಮ ಸ್ಥಾನ ಪಡೆದಿದ್ದು, ಲೋಕಸಭೆಯ 300 ಸಂಸದರಲ್ಲಿ ಇಂದೋರ್ ಸಂಸದ ಶಂಕರ್ ಲಾಲ್ವಾನಿ ಮೊದಲ ಸ್ಥಾನದಲ್ಲಿದ್ದಾರೆ.
ಸಂಸದ ಶಂಕರ್ ಲಾಲ್ವಾನಿ ಅವರು ಅತ್ಯಂತ ಸಕ್ರಿಯರಾಗಿದ್ದು, ಲಾಕ್‌ಡೌನ್‌ನಿಂದ ಅನ್ಲಾಕ್ ಪ್ರಕ್ರಿಯಿಯೆ ತನಕ ಅವರು ಜನರೊಂದಿಗಿದ್ದರು. ಇದರ ಆಧಾರದ ಮೇಲೆ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ಪ್ರೊಫೆಸರ್ ಧವಾಜ್ ಮೆಹ್ತಾ ಮತ್ತು ಅವರ ತಂಡ ನಡೆಸಿದ ಸಮೀಕ್ಷೆಯಲ್ಲಿ ಲಾಲ್ವಾನಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಸದರು ಸಾರ್ವಜನಿಕ ಜಾಗೃತಿ ಮತ್ತು ಸಂಸದೀಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯಕ್ಕಾಗಿ ಮಾಡಿದ ಕಾರ್ಯಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.