ಸಾತ್ನಾ(ಮಧ್ಯಪ್ರದೇಶ): ಎಲ್ಲೆಡೆ ದೀಪಾವಳಿ ಸಂಭ್ರಮ. ಮನೆಗೆ ಹೊಸ ವಾಹನ, ಚಿನ್ನಾಭರಣ ತೆಗೆದುಕೊಂಡು ಬರುವುದು ಸರ್ವೆ ಸಾಮಾನ್ಯ. ಇದೇ ಖುಷಿಯಲ್ಲಿ ಹೊಸ ಸ್ಕೂಟರ್ ಖರೀದಿ ಮಾಡಿರುವ ವ್ಯಕ್ತಿಯೊಬ್ಬ ಹಣ ಸಂದಾಯ ಮಾಡಿರುವುದು ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಮಧ್ಯಪ್ರದೇಶದ ಸಾತ್ನಾದಲ್ಲಿ ವಾಸವಾಗಿರುವ ರಾಕೇಶ್ ಕುಮಾರ್ ಗುಪ್ತಾ ಹೋಂಡಾ ಆಕ್ಟಿವಾ 125 ಖರೀದಿ ಮಾಡಿದ್ದಾರೆ. ಆದರೆ, ಅದಕ್ಕೆ ಹಣ ಸಂದಾಯ ಮಾಡಿರುವುದು ಮಾತ್ರ ಚಿಲ್ಲರೆ ರೂಪದಲ್ಲಿ. ಬರೋಬ್ಬರಿ 83 ಸಾವಿರ ರೂ ಐದು ಹಾಗೂ 10 ರೂ ಮುಖ ಬೆಲೆಯ ಚಿಲ್ಲರೆ ನೀಡಿದ್ದು, ಇದರ ಎಣಿಕೆ ಮಾಡಲು ಅಂಗಡಿಯವರು ಬರೋಬ್ಬರಿ 3 ಗಂಟೆಗಳ ಕಾಲ ತೆಗೆದುಕೊಂಡಿದೆ.
ರಾಕೇಶ್ ಸ್ಥಳೀಯ ಡೀಲರ್ಶಿಪ್ಗೆ ಭೇಟಿ ನೀಡಿದ್ದು, ಹೊಸ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದಾನೆ. ಈ ವೇಳೆ, ಇಷ್ಟು ಹಣ ಚಿಲ್ಲರೆ ರೂಪದಲ್ಲಿ ನೀಡಿರುವುದನ್ನ ನೋಡಿ ಅಂಗಡಿಯವರು ಶಾಕ್ಗೆ ಒಳಗಾಗಿದ್ದಾರೆ. ಆದರೆ, ಈ ವೇಳೆ ಯಾವುದೇ ಮರು ಮಾತನಾಡೇ ಹಣ ತೆಗೆದುಕೊಂಡು ವಾಹನದ ಕೀ ವ್ಯಕ್ತಿ ಕೈಯಲ್ಲಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಆಗಿರುವ ಹೊಂಡಾ ಮೋಟರ್ ಸೈಕನ್ನ ಈ ಸ್ಕೂಟರ್ ಬೆಲೆ 83 ಸಾವಿರ(ಎಲ್ಲ ಟ್ಯಾಕ್ಸ್ ಸೇರಿ). ಇದೀಗ ವ್ಯಕ್ತಿಯ ನಡೆಗೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.